56ನೇ ಐ ಎಫ್ ಎಫ್ ಐ ನಲ್ಲಿ ಹೆಸಮ್ ಫರಾಹ್ಮಂಡ್ ಮತ್ತು ಟೋನಿಸ್ ಪಿಲ್ ಅವರಿಗೆ ಜಂಟಿ ಚೊಚ್ಚಲ ಗೌರವ
56ನೇ ಐ ಎಫ್ ಎಫ್ ಐ ನಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಹಂಚಿಕೊಂಡ ‘ಮೈ ಡಾಟರ್ಸ್ ಹೇರ್’ ಮತ್ತು 'ಫ್ರಾಂಕ್'
56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು, ಅತ್ಯುತ್ತಮ ಚೊಚ್ಚಲ ಚಲನಚಿತ್ರ ನಿರ್ದೇಶಕ ಪ್ರಶಸ್ತಿಯನ್ನು ಇಬ್ಬರು ಅತ್ಯುತ್ತಮ ಮೊದಲ ಬಾರಿಗೆ ಚಲನಚಿತ್ರ ನಿರ್ದೇಶಕರಿಗೆ- ಇರಾನಿನ ಚಲನಚಿತ್ರ 'ಮೈ ಡಾಟರ್ಸ್ ಹೇರ್' ಗಾಗಿ ಹೆಸಮ್ ಫರಾಹ್ಮಂಡ್ ಮತ್ತು ಎಸ್ಟೋನಿಯನ್ ಚಲನಚಿತ್ರ 'ಫ್ರಾಂಕ್' ಗಾಗಿ ಟೋನಿಸ್ ಪಿಲ್ ಅವರಿಗೆ ಪ್ರದಾನ ಮಾಡಿತು. ಎರಡೂ ಚಿತ್ರಗಳು ದೂರದೃಷ್ಟಿ ಮತ್ತು ಕರಕುಶಲತೆಯಲ್ಲಿ ಪ್ರತ್ಯೇಕವಾಗಿ ಕಂಡವು ಮತ್ತು ಈ ವರ್ಷದ ಚಲನಚಿತ್ರೋತ್ಸವದಲ್ಲಿ ಚೊಚ್ಚಲ ಚಲನಚಿತ್ರವನ್ನು ವ್ಯಾಖ್ಯಾನಿಸುವ ಶಕ್ತಿ, ಧ್ವನಿ ಮತ್ತು ಭಾವನಾತ್ಮಕ ಸ್ಪಷ್ಟತೆಯನ್ನು ಪ್ರತಿನಿಧಿಸುತ್ತವೆ. ವಿಜೇತರು ಸಿಲ್ವರ್ ಪೀಕಾಕ್ ಟ್ರೋಫಿ, ಪ್ರಮಾಣಪತ್ರ ಮತ್ತು ₹10,00,000 ರೂಪಾಯಿ ನಗದು ಬಹುಮಾನವನ್ನು ಪಡೆದರು. ಈ ಪ್ರಶಸ್ತಿಯನ್ನು ಗೋವಾ ಮುಖ್ಯಮಂತ್ರಿ ಶ್ರೀ. ಪ್ರಮೋದ್ ಸಾವಂತ್ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಐಎಫ್‌ಎಫ್‌ಐ ತೀರ್ಪುಗಾರರ ಅಧ್ಯಕ್ಷರಾದ ಶ್ರೀ. ರಾಕೇಶ್ ಓಂಪ್ರಕಾಶ್ ಮೆಹ್ರಾ ಮತ್ತು ಉತ್ಸವ ನಿರ್ದೇಶಕ ಶ್ರೀ. ಶೇಖರ್ ಕಪೂರ್ ಅವರ ಸಮಕ್ಷಮದಲ್ಲಿ ಪ್ರದಾನ ಮಾಡಿದರು.

”ಒಂದಲ್ಲ, ಎರಡು ಸಿನಿಮೀಯ ಕೃತಿಗಳ ಅದ್ಭುತ ಪ್ರತಿಭೆಯಿಂದ ನಾವು ಸಮಾನವಾಗಿ ಪ್ರಭಾವಿತರಾಗಿದ್ದೇವೆ. ಆದ್ದರಿಂದ, ಪ್ರಭಾವಶಾಲಿ ಪ್ರತಿಭೆಯನ್ನು ಪ್ರದರ್ಶಿಸಿದ ಇಬ್ಬರು ನಿರ್ದೇಶಕರನ್ನು ಗುರುತಿಸಲು ನಾವು ಸಂತೋಷಪಡುತ್ತೇವೆ, ಅವರ ವೃತ್ತಿಜೀವನವು ಭವಿಷ್ಯದಲ್ಲಿ ಇನ್ನೂ ಅನೇಕ ಅತ್ಯುತ್ತಮ ಚಿಂತನಶೀಲ ಕಥೆಗಳನ್ನು ನೀಡುತ್ತದೆ. ಇಲ್ಲಿಂದ ಹೆಸಮ್ ಫರಾಹ್ಮಂಡ್ ಮತ್ತು ಟೋನಿಸ್ ಪಿಲ್ ಅವರ ಪ್ರಯಾಣದಲ್ಲಿ ನಾವು ಶುಭ ಹಾರೈಸುತ್ತೇವೆ’’ ಎಂದು ತೀರ್ಪುಗಾರರು ಹೇಳಿದರು. ಈ ಭಾವನೆಯು ಒಂದೇ ಹೆಸರಿಗೆ ಸೀಮಿತವಾಗದ ಕಲಾತ್ಮಕ ಶ್ರೇಷ್ಠತೆಯನ್ನು ಗುರುತಿಸುವ ಮೂಲಕ ಹಂಚಿಕೆಯ ಗೌರವಕ್ಕೆ ಕಾರಣವಾಯಿತು.
56ನೇ ಐಎಫ್‌ಎಫ್‌ಐನಲ್ಲಿ ಜಂಟಿ ಪ್ರಶಸ್ತಿಯು ಚಲನಚಿತ್ರಗಳನ್ನು ಮಾತ್ರವಲ್ಲದೆ, ಮುಂದಿನ ಪ್ರಯಾಣಗಳನ್ನೂ ಗುರುತಿಸುತ್ತದೆ. ಚಲನಚಿತ್ರೋತ್ಸವವು ಇಬ್ಬರೂ ನಿರ್ದೇಶಕರಿಗೆ ತನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿತು ಮತ್ತು ಅವರ ವಿಕಸನಗೊಳ್ಳುತ್ತಿರುವ ಸೃಜನಶೀಲ ಹಾದಿಗಳಿಂದ ಇನ್ನೂ ಅನೇಕ ಆಳವಾದ ಕಥೆಗಳನ್ನು ನಿರೀಕ್ಷಿಸುತ್ತದೆಂದು ಹೇಳಿತು.
‘ಮೈ ಡಾಟರ್ ಹೇರ್’ ಚಿತ್ರದ ಸಂಕ್ಷಿಪ್ತ ವಿವರಣೆ

ರಾಹಾ ಅನಿಮೇಷನ್ ಕಲಿಯುತ್ತಿರುವ ಹದಿಹರೆಯದ ಹುಡುಗಿ, ಆದರೆ ಅವಳು ತನ್ನ ವಿಶ್ವವಿದ್ಯಾಲಯದ ಪ್ರಾಜೆಕ್ಟ್ ಅನ್ನು ಸಲ್ಲಿಸಲು ಮುಂದಾದಾಗ ಅವಳ ಲ್ಯಾಪ್‌ಟಾಪ್ ಕಳುವಾಗುತ್ತದೆ ಮತ್ತು ಅವಳು ತನ್ನ ಕೂದಲನ್ನು ಕತ್ತರಿಸಿ ಹೊಸ ಲ್ಯಾಪ್‌ಟಾಪ್ ಖರೀದಿಸಬೇಕಾಗುತ್ತದೆ. ಅವಳ ತಂದೆ ತೋಹೀದ್ ತನ್ನ ಮಗಳ ಕೂದಲನ್ನು ಮಾರಾಟ ಮಾಡಿದ ಹಣವನ್ನು ಬಳಸಿಕೊಂಡು ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಖರೀದಿಸುತ್ತಾನೆ. ಆದರೂ ಹೊಸ ಲ್ಯಾಪ್‌ಟಾಪ್ ರಾಹಾಳ ಕುಟುಂಬವನ್ನು ನಿಗೂಢ ಸಾಹಸಕ್ಕೆ ದೂಡುತ್ತದೆ. ಲ್ಯಾಪ್‌ಟಾಪ್‌ನ ಮಾಲೀಕತ್ವವು ಶ್ರೀಮಂತ ಕುಟುಂಬದೊಂದಿಗೆ ಸಂಘರ್ಷಕ್ಕೆ ಕಾರಣವಾಗುತ್ತದೆ, ಸಂಘರ್ಷಗಳನ್ನು ಹೆಚ್ಚಿಸುತ್ತದೆ. ಉತ್ತಮ ಜೀವನ ಮತ್ತು ಉಳಿವಿಗಾಗಿ ಶ್ರಮಿಸುತ್ತಿರುವ ಸಾಮಾನ್ಯ ಜನರು ಎದುರಿಸುತ್ತಿರುವ ಕಠಿಣ ವಾಸ್ತವಗಳನ್ನು ಮತ್ತು ಅವರ ತ್ಯಾಗಗಳನ್ನು ಈ ಚಿತ್ರ ಚಿತ್ರಿಸುತ್ತದೆ.
‘ಮೈ ಡಾಟರ್ ಹೇರ್ ‘ ಪಿಸಿ ಲಿಂಕ್
‘ಫ್ರಾಂಕ್’ನ ಸಂಕ್ಷಿಪ್ತ ವಿವರಣೆ

ಫ್ರಾಂಕ್ ಎಂಬುದು 13 ವರ್ಷದ ಪಾಲ್ ಬಗ್ಗೆ ಎಸ್ಟೋನಿಯನ್ ನಾಟಕವಾಗಿದ್ದು, ಆತ ತನ್ನ ಹಿಂಸಾತ್ಮಕ ತಂದೆಯೊಂದಿಗೆ ಜಗಳದ ನಂತರ, ತನ್ನ ಚಿಕ್ಕಪ್ಪನೊಂದಿಗೆ ವಾಸಿಸಲು ಪರಿಚಯವಿಲ್ಲದ ಪಟ್ಟಣಕ್ಕೆ ಓಡಿಹೋಗುತ್ತಾನೆ. ಸಂತೋಷದ ಹುಡುಕಾಟದಲ್ಲಿ ಪಾಲ್ ಹಲವು ಕಳಪೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ ಆದರೆ ವಿಚಿತ್ರ ವಿಶೇಷಚೇತನ ವ್ಯಕ್ತಿಯ ಮೂಲಕ ಅನಿರೀಕ್ಷಿತ ಬೆಂಬಲವನ್ನು ಪಡೆಯುತ್ತಾನೆ, ಅವನು ಅವನ ಪತನವನ್ನು ತಡೆಯಲು ಸಹಾಯ ಮಾಡುತ್ತಾನೆ. ಈ ಚಲನಚಿತ್ರವು ಒಡೆದ ಕುಟುಂಬಗಳು, ಬಾಲ್ಯದ ಆಘಾತ ಮತ್ತು ಹದಿಹರೆಯದ ನೋವಿನ ದಿಟ್ಟ ನಿರೂಪಣೆಯಾಗಿದ್ದು, ಸಂಪೂರ್ಣ ವಾಸ್ತವಿಕತೆಯನ್ನು ಭರವಸೆ ಮತ್ತು ಗುಣಪಡಿಸುವಿಕೆಯ ಕ್ಷಣಗಳೊಂದಿಗೆ ಬೆರೆಸುತ್ತದೆ. ಫ್ರಾಂಕ್ ಅವರ ಮನಮೋಹಕ ಅಭಿನಯ ಮತ್ತು ಎಸ್ಟೋನಿಯಾದಲ್ಲಿ ಯುವ ಹೋರಾಟಗಳ ಭಾವನಾತ್ಮಕ, ಸತ್ಯ ದೃಶ್ಯಗಳಿಂದ ಪ್ರಶಂಸಿಸಲ್ಪಟ್ಟಿದೆ.
‘ಫ್ರಾಂಕ್ ‘ನ ಸುದ್ದಿಗೋಷ್ಠಿ ಲಿಂಕ್
ಐ ಎಫ್ ಎಫ್ ಐ ಕುರಿತು
1952ರಲ್ಲಿ ಆರಂಭವಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿ ಮುಂಚೂಣಿಯಲ್ಲಿ ನಿಂತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯಡಿ ಬರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ಇ ಎಸ್ ಜಿ) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು ದಿಟ್ಟ ಪ್ರಯೋಗಗಳನ್ನು ಒಳಗೊಂಡಿವೆ ಮತ್ತು ಕಲಾವಿದ ದಿಗ್ಗಜರು ಭಯವಿಲ್ಲದ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐಎಫ್ ಎಫ್ ಐ ನಿಜವಾಗಿಯೂ ಮಿಂಚುವಂತೆ ಮಾಡುವುದು ಅದರಲ್ಲಿನ ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು, ಗೌರವಗಳು ಮೊದಲಾದ ಅದ್ಭುತ ಸಮ್ಮಿಶ್ರಣಗಳು ಮತ್ತು ಅಧಿಕ ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹೊಸ ಎತ್ತರಕ್ಕೆ ಏರುತ್ತವೆ. ನವೆಂಬರ್ 20ರಿಂದ 28ರವರೆಗೆ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಇರುವ ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತಿರುವ 56 ನೇ ಆವೃತ್ತಿಯ ಚಲನಚಿತ್ರೋತ್ಸವದಲ್ಲಿ ನಾನಾ ಭಾಷೆಗಳ, ಪ್ರಕಾರಗಳ, ನಾವೀನ್ಯತೆಗಳ ಮತ್ತು ಧ್ವನಿಗಳ ಬೆರಗುಗೊಳಿಸುವ ವರ್ಣಪಟಲಕ್ಕೆ ಭರವಸೆ ನೀಡುವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ- ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಸಂಭ್ರಮದ ಆಚರಣೆಯಾಗಿದೆ.
For more information, click on:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
रिलीज़ आईडी:
2196942
| Visitor Counter:
11