ರೈಲ್ವೇ ಸಚಿವಾಲಯ
azadi ka amrit mahotsav

ಕಾಶಿ ತಮಿಳು ಸಂಗಮ 4.0 ಗಾಗಿ ತಮಿಳುನಾಡಿನಿಂದ ಬನಾರಸ್‌ಗೆ ಏಳು ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಕಲ್ಪಿಸಿದ ಭಾರತೀಯ ರೈಲ್ವೆ

प्रविष्टि तिथि: 02 DEC 2025 2:51PM by PIB Bengaluru

ಭಾರತೀಯ ರೈಲ್ವೆ, ಕಾಶಿ ತಮಿಳು ಸಂಗಮ 4.0 ನಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಕನ್ಯಾಕುಮಾರಿ, ಚೆನ್ನೈ, ಕೊಯಮತ್ತೂರು ಮತ್ತು ಬನಾರಸ್ ನಡುವೆ ಏಳು ವಿಶೇಷ ರೈಲುಗಳ ಸಂಚಾರ ಸರಣಿಯನ್ನು ನಿರ್ವಹಿಸುತ್ತಿದೆ. ಇದು ತಮಿಳು ಮಾತನಾಡುವ ಪ್ರದೇಶ ಮತ್ತು ಕಾಶಿಯ ಪ್ರಾಚೀನ ಆಧ್ಯಾತ್ಮಿಕ ಕೇಂದ್ರದ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಬಲವರ್ಧನೆಗೊಳಿಸುತ್ತದೆ. ಬಹು ದಿನಗಳ ಸಾಂಸ್ಕೃತಿಕ ಒಳಗೊಳ್ಳುವಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ತಡೆರಹಿತ ಪ್ರಯಾಣ, ಆರಾಮದಾಯಕವಾದ ದೂರದ ಸಂಪರ್ಕ ಮತ್ತು ಸಮಯೋಚಿತ ಆಗಮನವನ್ನು ಖಾತ್ರಿಪಡಿಸಿಕೊಳ್ಳಲು ಈ ವಿಶೇಷ ರೈಲುಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

2025 ರ ನವೆಂಬರ್ 29 ರಂದು ಕನ್ಯಾಕುಮಾರಿಯಿಂದ ಹೊರಟ ಮೊದಲ ರೈಲಿನೊಂದಿಗೆ ಈ ವಿಶೇಷ ಸೇವೆಗಳು ಆರಂಭವಾದವು. ಇದರ ನಂತರ ಇಂದು ಚೆನ್ನೈನಿಂದ ಹೆಚ್ಚುವರಿ ವಿಶೇಷ ರೈಲು ನಿರ್ಮಿಸಿತು. ಮುಂದಿನ ನಿರ್ಗಮನಗಳು 2025ರ ಡಿಸೆಂಬರ್ 3 ರಂದು ಕೊಯಮತ್ತೂರಿನಿಂದ, ಡಿಸೆಂಬರ್ 6 ರಂದು ಚೆನ್ನೈನಿಂದ, ಡಿಸೆಂಬರ್ 7 ರಂದು ಕನ್ಯಾಕುಮಾರಿಯಿಂದ, ಡಿಸೆಂಬರ್ 9 ರಂದು ಕೊಯಮತ್ತೂರಿನಿಂದ ಮತ್ತು ಡಿಸೆಂಬರ್ 12 ರಂದು ಚೆನ್ನೈನಿಂದ ಮತ್ತೊಂದು ರೈಲು ಸೇವೆಯನ್ನು ನಿಗದಿಪಡಿಸಲಾಗಿದೆ. ಈ ನಿಯೋಜಿತ ರೈಲುಗಳ ನಿರ್ಗಮನಗಳೊಂದಿಗೆ ಒಟ್ಟು ಏಳು ವಿಶೇಷ ರೈಲುಗಳು ತಮಿಳುನಾಡಿನ ಪ್ರಮುಖ ಮೂಲ ನಗರಗಳಿಂದ ಬನಾರಸ್‌ಗೆ ಸುಸಂಘಟಿತ ಮತ್ತು ಹಂತ ಹಂತವಾಗಿ ಸಂಚಾರ ಕೈಗೊಳ್ಳಲಿವೆ.

ಭಾರತೀಯ ರೈಲ್ವೆ ಸಮಯೋಚಿತವಾಗಿ ಹಿಂದಿರುಗುವ ಪ್ರಯಾಣವನ್ನು ಖಾತ್ರಿಪಡಿಸಿಕೊಳ್ಳಲು, ಬನಾರಸ್‌ನಿಂದ ವಿಶೇಷ ಹಿಂತಿರುಗುವ ರೈಲು ಸೇವೆಗಳ ಸರಣಿಯ ಏರ್ಪಾಡು ಮಾಡಿದೆ. ಅವುಗಳಲ್ಲಿ ಡಿಸೆಂಬರ್ 5 ರಂದು ಕನ್ಯಾಕುಮಾರಿಗೆ, ಡಿಸೆಂಬರ್ 7 ರಂದು ಚೆನ್ನೈಗೆ ಮತ್ತು ಡಿಸೆಂಬರ್ 9 ರಂದು ಕೊಯಮತ್ತೂರಿಗೆ ನಿರ್ಗಮನ, ನಂತರ ಡಿಸೆಂಬರ್ 11 ರಂದು ಚೆನ್ನೈಗೆ, ಡಿಸೆಂಬರ್ 13 ರಂದು ಕನ್ಯಾಕುಮಾರಿಗೆ, ಡಿಸೆಂಬರ್ 15 ರಂದು ಕೊಯಮತ್ತೂರಿಗೆ ಮತ್ತು ಡಿಸೆಂಬರ್ 17 ರಂದು ಮತ್ತೆ ಚೆನ್ನೈಗೆ ಹೆಚ್ಚುವರಿ ಹಿಂತಿರುಗುವ ರೈಲು ಸೇವೆಗಳ ವ್ಯವಸ್ಥೆ ಮಾಡಲಾಗಿದೆ.

ಇಂದಿನಿಂದ ಆರಂಭವಾಗುವ ಕಾಶಿ ತಮಿಳು ಸಂಗಮಮ್ 4.0, ತಮಿಳುನಾಡು ಮತ್ತು ಕಾಶಿ ನಡುವಿನ ದೀರ್ಘಕಾಲದ ಸಾಂಸ್ಕೃತಿಕ ಸಂಪರ್ಕವನ್ನು ಮುಂದುವರಿಸಲಿದೆ. ಈ ಆವೃತ್ತಿಯು "ತಮಿಳು ಕಲಿಯೋಣ - ತಮಿಳು ಕರಕಳಂ’ ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದೆ, ಇದು ವಾರಣಾಸಿ ಶಾಲೆಗಳಲ್ಲಿ ತಮಿಳು ಕಲಿಕಾ ಉಪಕ್ರಮಗಳು, ಕಾಶಿ ಪ್ರದೇಶದಿಂದ ತಮಿಳುನಾಡಿಗೆ ವಿದ್ಯಾರ್ಥಿಗಳಿಗೆ ಅಧ್ಯಯನ ಪ್ರವಾಸಗಳು ಮತ್ತು ತೆಂಕಸಿಯಿಂದ ಕಾಶಿಗೆ ಸಾಂಕೇತಿಕ ಋಷಿ ಅಗಸ್ತ್ಯ ವಾಹನ ದಂಡಯಾತ್ರೆಯ ಮೂಲಕ ಎರಡು ಪ್ರದೇಶಗಳ ನಡುವೆ ಭಾಷಾ ಮತ್ತು ಸಾಂಸ್ಕೃತಿಕ ವಿನಿಮಯಗಳನ್ನು  ಉತ್ತೇಜಿಸುತ್ತದೆ.

ಕಾಶಿ ತಮಿಳು ಸಂಗಮಮ್ 4.0 ಏಕ್ ಭಾರತ್ ಶ್ರೇಷ್ಠ ಭಾರತದ ಸಾರವನ್ನು ಸಾಕಾರಗೊಳಿಸುತ್ತದೆ, ಜನರು ತಮ್ಮದೇ ಆದ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಶಂಸಿಸಲು ಪ್ರೋತ್ಸಾಹಿಸುತ್ತದೆ. ಶಿಕ್ಷಣ ಸಚಿವಾಲಯವು, ಐಐಟಿ ಮದ್ರಾಸ್ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯವು ಪ್ರಮುಖ ಜ್ಞಾನ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ರೈಲ್ವೆ ಸೇರಿದಂತೆ ಹತ್ತು ಸಚಿವಾಲಯಗಳ ಪಾಲ್ಗೊಳ್ಳುವಿಕೆಯೊಂದಿಗೆ ಎರಡೂ ಪ್ರದೇಶಗಳ ವಿದ್ಯಾರ್ಥಿಗಳು, ಕುಶಲಕರ್ಮಿಗಳು, ವಿದ್ವಾಂಸರು,  ಆಧ್ಯಾತ್ಮಿಕ ನಾಯಕರು, ಶಿಕ್ಷಕರು ಮತ್ತು ಸಾಂಸ್ಕೃತಿಕ ಸಾಧಕರನ್ನು ಒಗೂಡಿಸುತ್ತದೆ, ಅವರ ನಡುವೆ ವಿಚಾರಗಳು, ಸಾಂಸ್ಕೃತಿಕ ಆಚರಣೆಗಳು ಮತ್ತು ಸಾಂಪ್ರದಾಯಿಕ ಜ್ಞಾನದ ವಿನಿಮಯವನ್ನು ಸುಗಮಗೊಳಿಸುತ್ತದೆ.  

ಏಳು ವಿಶೇಷ ರೈಲುಗಳ ಸಂಚಾರ ವ್ಯವಸ್ಥೆಯನ್ನು ಕೈಗೊಳ್ಳುವ ಮೂಲಕ ಮತ್ತು ನಿಖರವಾಗಿ ಯೋಜಿಸಲಾದ ಸಾಂಸ್ಕೃತಿಕವಾಗಿ ಶ್ರೀಮಂತ ಪ್ರಯಾಣ ಮಾರ್ಗವನ್ನು ಸಂಘಟಿಸುವ ಮೂಲಕ ಭಾರತೀಯ ರೈಲ್ವೆ ದೇಶದ ವೈವಿಧ್ಯಮಯ ಪ್ರದೇಶಗಳನ್ನು ಸಂಪರ್ಕಿಸುವಲ್ಲಿ ಮತ್ತು ತಮಿಳುನಾಡು ಮತ್ತು ಕಾಶಿಯ ನಡುವಿನ ಹಂಚಿಕೆಯ ಪರಂಪರೆಯ ಬಲವರ್ಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

 

*****


(रिलीज़ आईडी: 2198074) आगंतुक पटल : 11
इस विज्ञप्ति को इन भाषाओं में पढ़ें: English , Urdu , हिन्दी , Manipuri , Gujarati , Tamil , Telugu , Malayalam