ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ತಂತ್ರಜ್ಞಾನ ಕೇಂದ್ರ ವ್ಯವಸ್ಥೆಗಳ ಕಾರ್ಯಕ್ರಮ (ಟಿಸಿಎಸ್ ಪಿ) ಅಡಿಯಲ್ಲಿ 9 ಹೆಚ್ಚುವರಿ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ
2025–26ರ ಹಣಕಾಸು ವರ್ಷದಲ್ಲಿ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ 200 ಕೋಟಿ ರೂ. ಹಂಚಿಕೆ
ಹೊಸ ಕೇಂದ್ರಗಳಿಂದ ಎಂಎಸ್ ಎಂಇ ಉದ್ಯಮಿಗಳು ಮತ್ತು ಉದ್ಯೋಗಿಗಳು ಸೇರಿ 3.28 ಲಕ್ಷಕ್ಕೂ ಅಧಿಕ ಮಂದಿಯಿಂದ ತರಬೇತಿ ಪೂರ್ಣ
प्रविष्टि तिथि:
05 DEC 2025 11:54AM by PIB Bengaluru
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂ ಎಸ್ ಎಂ ಇ) ತಾಂತ್ರಿಕ ಮತ್ತು ಕೌಶಲ್ಯ ಅಭಿವೃದ್ಧಿ ಬೆಂಬಲವನ್ನು ಒದಗಿಸಲು ಹಾಲಿ ಇರುವ 18 ತಂತ್ರಜ್ಞಾನ ಕೇಂದ್ರಗಳ ಜೊತೆಗೆ ತಂತ್ರಜ್ಞಾನ ಕೇಂದ್ರ ವ್ಯವಸ್ಥೆಗಳ ಕಾರ್ಯಕ್ರಮದ (ಟಿ ಸಿ ಎಸ್ ಪಿ) ಅಡಿಯಲ್ಲಿ 9 ಹೆಚ್ಚುವರಿ ಹೊಸ ತಂತ್ರಜ್ಞಾನ ಕೇಂದ್ರಗಳನ್ನು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂ ಎಸ್ ಎಂ ಇ) ಸಚಿವಾಲಯವು ಸ್ಥಾಪಿಸಿದೆ. ಟಿ ಸಿ ಎಸ್ ಪಿ ಅಡಿಯಲ್ಲಿ ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗಾಗಿ 2025–26ರ ಹಣಕಾಸು ವರ್ಷದಲ್ಲಿ 200.00 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಟಿ ಸಿ ಎಸ್ ಪಿ ಅಡಿಯಲ್ಲಿ ಸ್ಥಾಪಿಸಲಾದ ಹೊಸ ತಂತ್ರಜ್ಞಾನ ಕೇಂದ್ರಗಳು ಮತ್ತು ಹಾಲಿ ಇರುವ 18 ತಂತ್ರಜ್ಞಾನ ಕೇಂದ್ರಗಳು 2024-25ರಲ್ಲಿ ಎಂ ಎಸ್ ಎಂ ಇ ಉದ್ಯಮಿಗಳು ಮತ್ತು ಉದ್ಯೋಗಿಗಳು ಸೇರಿದಂತೆ 3.28 ಲಕ್ಷಕ್ಕೂ ಅಧಿಕ ಮಂದಿಗೆ ತರಬೇತಿ ನೀಡಿವೆ.
ತಂತ್ರಜ್ಞಾನ ಕೇಂದ್ರಗಳು ಕೃತಕ ಬುದ್ಧಿಮತ್ತೆ (ಎಐ) ರೊಬೊಟಿಕ್ಸ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಯಂತಹ ಸುಧಾರಿತ ತಂತ್ರಜ್ಞಾನಗಳಲ್ಲಿ ವಿಶೇಷ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಅಲ್ಲದೆ ಎಂ ಎಸ್ ಎಂ ಇ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಪರಿಚಯಿಸಲು ಎಐ, ರೊಬೊಟಿಕ್ಸ್ ಮತ್ತು ಐಒಟಿ ಮಾದರಿಗಳನ್ನು ನಿಯಮಿತ ದೀರ್ಘಾವಧಿಯ ಮತ್ತು ಅಲ್ಪಾವಧಿಯ ತರಬೇತಿ ಕಾರ್ಯಕ್ರಮಗಳಲ್ಲಿ ಸೇರಿಸಿಕೊಳ್ಳಲಾಗಿದೆ.
ಈ ಮಾಹಿತಿಯನ್ನು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಖಾತೆ ರಾಜ್ಯ ಸಚಿವರಾದ (ಸುಶ್ರೀ ಶೋಭಾ ಕರಂದ್ಲಾಜೆ) ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
*****
(रिलीज़ आईडी: 2199318)
आगंतुक पटल : 14