ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಎಂ ಎಸ್ ಎಂ ಇಗಳಿಗೆ ಆರ್ಥಿಕ ಬೆಂಬಲ, ತಂತ್ರಜ್ಞಾನ ಮತ್ತು ವ್ಯಾಪಾರ ಬೆಂಬಲ ಒದಗಿಸಲು ಹಲವು ಕ್ರಮಗಳನ್ನು ಕೈಗೊಂಡಿರುವ ಸರ್ಕಾರ


ಸುಮಾರು 14.6 ಲಕ್ಷ ಎಂ ಎಸ್ ಎಂ ಇ ಖಾತೆಗಳು ಅನುತ್ಪಾದಕ ಆಸ್ತಿಗೆ ಜಾರಿಬೀಳುವುದನ್ನು ಉಳಿಸಿದ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ (ಇ ಸಿ ಎಲ್ ಜಿ ಎಸ್)

ಉದ್ಯಮಗಳನ್ನು ಪ್ರಕ್ರಿಯೆಗಳನ್ನು ಆಧುನೀಕರಿಸಲು; ವ್ಯರ್ಥವಾಗುವುದನ್ನು ತಗ್ಗಿಲು ಮತ್ತು ಎಂ ಎಸ್ ಎಂ ಇ ಗಳ ವ್ಯವಹಾರ ಸ್ಪರ್ಧಾತ್ಮಕತೆ ತೀಕ್ಷ್ಣಗೊಳಿಸಲು ಎಂ ಎಸ್ ಎಂ ಇ ಚಾಂಪಿಯನ್ಸ್ ಯೋಜನೆ

प्रविष्टि तिथि: 08 DEC 2025 1:38PM by PIB Bengaluru

ದೇಶದಲ್ಲಿ ಎಂ ಎಸ್ ಎಂ ಇ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ಭಾರತ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಈ ಹಂತಗಳಲ್ಲಿ ಕೆಲವು ಈ ಕೆಳಗಿನಂತಿವೆ:

i. 2020ರಲ್ಲಿ ಅಳವಡಿಸಿಕೊಳ್ಳಲಾದ ಎಂ ಎಸ್ ಎಂ ಇ ಗಳನ್ನು ವ್ಯಾಖ್ಯಾನಿಸಲು ಹೊಸ ಪರಿಷ್ಕೃತ ಮಾನದಂಡಗಳು. ಇದನ್ನು 01.04.2025 ರಿಂದ ಅನ್ವಯವಾಗುವಂತೆ ಮತ್ತಷ್ಟು ಪರಿಷ್ಕರಿಸಲಾಗಿದೆ.

ii. 01.07.2020 ರಿಂದ ಅನ್ವಯವಾಗುವಂತೆ ವ್ಯವಹಾರವನ್ನು ಸುಲಭಗೊಳಿಸಲು ಎಂ ಎಸ್ ಎಂ ಇ ಗಳಿಗೆ ಉದ್ಯಮ್‌  ನೋಂದಣಿ.

iii. 02.07.2021 ರಿಂದ ಅನ್ವಯವಾಗುವಂತೆ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳನ್ನು ಎಂ ಎಸ್ ಎಂ ಇ ಗಳಾಗಿ ಸೇರಿಸುವುದು.

iv. ಎಂ ಎಸ್ ಎಂ ಇ ಗಳ ಸ್ಥಿತಿಯಲ್ಲಿ ಮೇಲ್ಮುಖ ಬದಲಾವಣೆಯ ಸಂದರ್ಭದಲ್ಲಿ ತೆರಿಗೆ ರಹಿತ ಪ್ರಯೋಜನಗಳನ್ನು 3 ವರ್ಷಗಳವರೆಗೆ ವಿಸ್ತರಿಸಲಾಗಿದೆ.

v. ಆದ್ಯತಾ ವಲಯದ ಲ್ಯಾಂಡಿಂಗ್ ಅಡಿಯಲ್ಲಿ ಪ್ರಯೋಜನವನ್ನು ಪಡೆಯಲು ಅಸಂಘತ ಅತಿಸಣ್ಣ ಕೈಗಾರಿಕೆಗಳನ್ನು ಸಂಘಟಿತ ವ್ಯಾಪ್ತಿಯೊಳಗೆ ತರಲು 11.01.2023 ರಂದು ಉದ್ಯಮ್ ಸಹಾಯ ವೇದಿಕೆಯನ್ನು ಆರಂಭಿಸಲಾಯಿತು.

vi. ಎಂಎಸ್ ಎಂಇಗಳಿಗೆ ಇಕ್ವಿಟಿ ಒಳಹರಿವಿಗಾಗಿ ಸ್ವಾವಲಂಬಿ ಭಾರತ ನಿಧಿಯ ಕಾರ್ಯಾಚರಣೆ.

Vii ಎಂಎಸ್ ಎಂಇಗಳು ಸೇರಿದಂತೆ ವ್ಯವಹಾರಗಳಿಗೆ 5 ಲಕ್ಷ ಕೋಟಿ ರೂ. ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ (ಇ ಸಿ ಎಲ್ ಜಿ ಎಸ್) ಆರಂಭ. ಈ ಯೋಜನೆ 31.03.2023 ರವರೆಗೆ ಕಾರ್ಯನಿರ್ವಹಿಸುತ್ತಿತ್ತು. ಇ ಸಿ ಎಲ್ ಜಿ ಎಸ್ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 23.01.2023 ರ ಸಂಶೋಧನಾ ವರದಿಯ ಪ್ರಕಾರ, ಸುಮಾರು 14.6 ಲಕ್ಷ MSME ಖಾತೆಗಳು, ಅವುಗಳಲ್ಲಿ ಸುಮಾರು ಶೇ.98.3ರಷ್ಟುಸ ಖಾತೆಗಳು ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳ ವರ್ಗಗಳಲ್ಲಿವೆ, ಆ ಮೂಲಕ ಅನುತ್ಪಾದಕ ಆಸ್ತಿ ವರ್ಗಕ್ಕೆ(ಎನ್ ಪಿ ಎಗೆ) ಜಾರಿಬೀಳುವುದನ್ನು ಉಳಿಸಲಾಗಿದೆ.

ಚರ್ಮ ಮತ್ತು ಜವಳಿ ವಲಯ ಸೇರಿದಂತೆ ವಿವಿಧ ಎಂಎಸ್ ಎಂಇ ಗಳಿಗೆ ಸಾಕಷ್ಟು ಆರ್ಥಿಕ ಬೆಂಬಲ ಮತ್ತು ತಂತ್ರಜ್ಞಾನ ಮತ್ತು ವ್ಯಾಪಾರ ಬೆಂಬಲವನ್ನು ಒದಗಿಸಲು, ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ, ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಬ್ಯಾಂಕ್ ಸಾಲದ ಮೇಲೆ ಮಾರ್ಜಿನ್ ಮನಿ ಸಬ್ಸಿಡಿಯನ್ನು ಒದಗಿಸುವ ಮೂಲಕ ಕೃಷಿಯೇತರ ವಲಯದಲ್ಲಿ ಹೊಸ ಅತಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ, ಸಸ್ಯ ಮತ್ತು ಯಂತ್ರೋಪಕರಣಗಳು/ಉಪಕರಣಗಳ ಸಂಗ್ರಹಣೆಗಾಗಿ ಸಾಂಸ್ಥಿಕ ಹಣಕಾಸಿನ ಮೇಲೆ ಪ.ಜಾ/ಪ.ಪಂ, ಎಂ ಎಸ್ ಇ ಗಳಿಗೆ ಶೇ.25ರಷ್ಟು ಸಬ್ಸಿಡಿಯೊಂದಿಗೆ ವಿಶೇಷ ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಯೋಜನೆ, 10 ಕೋಟಿ ರೂಪಾಯಿ ವರೆಗಿನ ಖಾತರಿ ವ್ಯಾಪ್ತಿಯೊಂದಿಗೆ ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಮೇಲಾಧಾರ ರಹಿತ ಸಾಲಗಳಿಗೆ ಸಾಲ ಖಾತ್ರಿ ಯೋಜನೆ ( ಕ್ರೆಡಿಟ್ ಗ್ಯಾರಂಟಿ ಯೋಜನೆ), ಅಸಂಘಿಟಿತ ಅತಿ ಸಣ್ಣ ಉದ್ಯಮಗಳಿಗೆ 20 ಲಕ್ಷ ರೂ,ಗಳವರೆಗೆ ಮೇಲಾಧಾರ ರಹಿತ ಸಾಲಗಳು, ಪಿಎಂ ವಿಶ್ವಕರ್ಮ ಯೋಜನೆ, ಮುದ್ರಾ ಸಾಲ, ಇತ್ಯಾದಿ.

ಉದ್ಯಮಗಳ ಪ್ರಕ್ರಿಯೆಗಳನ್ನು ಆಧುನೀಕರಿಸುವುದು, ಅನಗತ್ಯ ವ್ಯರ್ಥಗಳನ್ನು ತಗ್ಗಿಸುವುದು, ಉದ್ಯಮಗಳ ವ್ಯವಹಾರ ಸ್ಪರ್ಧಾತ್ಮಕತೆಯನ್ನು ತೀಕ್ಷ್ಣಗೊಳಿಸುವುದು ಮತ್ತು ಅವುಗಳ ರಾಷ್ಟ್ರೀಯ ಮತ್ತು ಜಾಗತಿಕ ವ್ಯಾಪ್ತಿ ಮತ್ತು ಶ್ರೇಷ್ಠತೆಯನ್ನು ಸುಗಮಗೊಳಿಸುವ ಅಂತಿಮ ಉದ್ದೇಶದಿಂದ ಎಂಎಸ್ಎಂಇ ಚಾಂಪಿಯನ್ಸ್ ಯೋಜನೆಯನ್ನು ರೂಪಿಸಲಾಗಿದೆ. ಅಲ್ಲದೆ, ಎಂಎಸ್ಎಂಇ ಸಚಿವಾಲಯವು, ಎಂಎಸ್ಎಂಇ ಗಳು ತಾಂತ್ರಿಕವಾಗಿ ಬೆಳೆಯಲು ಮತ್ತು ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡಲು, ದೇಶಾದ್ಯಂತ ತಂತ್ರಜ್ಞಾನ ಕೇಂದ್ರಗಳು (ಟಿಸಿಎಸ್) ಮತ್ತು ವಿಸ್ತರಣಾ ಕೇಂದ್ರಗಳನ್ನು (ಇಸಿಎಸ್ ) ಸ್ಥಾಪಿಸಿದೆ. ಈ ಟಿಸಿಎಸ್ /ಇಸಿಎಸ್ ಎಂಎಸ್ ಎಂಇಗಳು ಮತ್ತು ಕೌಶಲ್ಯ ಅನ್ವೇಷಕರಿಗೆ ತಂತ್ರಜ್ಞಾನ ಬೆಂಬಲ, ಕೌಶಲ್ಯಾಭಿವೃದ್ಧಿ, ಇನ್ಕ್ಯುಬೇಶನ್ ಮತ್ತು ಸಲಹಾ ಸೇವೆಗಳಂತಹ ವಿವಿಧ ಸೇವೆಗಳನ್ನು ಒದಗಿಸುತ್ತವೆ.

ಈ ಮಾಹಿತಿಯನ್ನು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಖಾತೆ ರಾಜ್ಯ ಸಚಿವರಾದ (ಸುಶ್ರೀ ಶೋಭಾ ಕರಂದ್ಲಾಜೆ) ಅವರು ಇಂದು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

 

*****


(रिलीज़ आईडी: 2200329) आगंतुक पटल : 17
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil