ರೈಲ್ವೇ ಸಚಿವಾಲಯ
azadi ka amrit mahotsav

ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆ ಆರ್‌ ಸಿ ಎಲ್) ಅನ್ನು ವಿಲೀನಗೊಳಿಸುವುದು ಅದರಲ್ಲಿ ಪಾಲು ಹೊಂದಿರುವ ನಾಲ್ಕು ರಾಜ್ಯ ಸರ್ಕಾರಗಳ ಮೇಲೆ ಅವಲಂಬಿತವಾಗಿದೆ


ಮಂಗಳೂರು - ಮುಂಬೈ ವಲಯವು 28 ಜೋಡಿ ರೈಲು ಸೇವೆಗಳನ್ನು ಮತ್ತು ಮಂಗಳೂರು - ಮಡಗಾಂವ್ ವಲಯವು 33 ಜೋಡಿ ರೈಲು ಸೇವೆಗಳನ್ನು ಒದಗಿಸುತ್ತಿದೆ

ಕೊಂಕಣ ರೈಲ್ವೆಯ ವ್ಯಾಪ್ತಿಯಲ್ಲಿರುವ ಒಟ್ಟು 739 ಕಿಲೋಮೀಟರ್ ಮಾರ್ಗದಲ್ಲಿ, ರೋಹಾ-ವೀರ್ ಮತ್ತು ಮಡಗಾಂವ್-ಮಜೋರ್ಡಾ ವಿಭಾಗಗಳ ನಡುವಿನ ಸುಮಾರು 55 ಕಿಲೋಮೀಟರ್ ಮಾರ್ಗವನ್ನು ಈಗಾಗಲೇ ದ್ವಿಪಥಗೊಳಿಸಲಾಗಿದೆ

प्रविष्टि तिथि: 17 DEC 2025 4:57PM by PIB Bengaluru

ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆ ಆರ್‌ ಸಿ ಎಲ್) ಅನ್ನು ವಿಲೀನಗೊಳಿಸುವುದು ಕೆ ಆರ್‌ ಸಿ ಎಲ್ ನಲ್ಲಿ ಪಾಲು ಹೊಂದಿರುವ ನಾಲ್ಕು ರಾಜ್ಯ ಸರ್ಕಾರಗಳ ಮೇಲೆ ಅವಲಂಬಿತವಾಗಿದೆ ಎಂದು ರೈಲ್ವೆ ಸಚಿವರಾದ ಶ್ರೀ ಆಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆ ಆರ್‌ ಸಿ ಎಲ್) ಅನ್ನು ರೈಲ್ವೆ ಸಚಿವಾಲಯ, ಮಹಾರಾಷ್ಟ್ರ ಸರ್ಕಾರ, ಗೋವಾ ಸರ್ಕಾರ, ಕರ್ನಾಟಕ ಸರ್ಕಾರ ಮತ್ತು ಕೇರಳ ಸರ್ಕಾರದ ಪಾಲುದಾರಿಕೆಯೊಂದಿಗೆ 1990ರಲ್ಲಿ ಸ್ಥಾಪಿಸಲಾಯಿತು, ಕೊಂಕಣ ರೈಲ್ವೆ ಮಾರ್ಗವು ಮಹಾರಾಷ್ಟ್ರದ ರೋಹಾದಿಂದ ಕರ್ನಾಟಕದ ತೋಕೂರಿನವರೆಗೆ ವಿಸ್ತರಿಸಿದ್ದು, ಪಶ್ಚಿಮ ಘಟ್ಟಗಳ ಕಠಿಣ ಭೂಪ್ರದೇಶವನ್ನು ಹಾದುಹೋಗುತ್ತದೆ.

ಕೆ ಆರ್‌ ಸಿ ಎಲ್ ನ ಪ್ರಸ್ತುತ ಪಾಲುದಾರರ ರಚನೆಯು ಈ ಕೆಳಗಿನಂತಿದೆ:

ಕ್ರ.ಸಂ

ಪಾಲುದಾರರ ಹೆಸರು

ಪಾಲುದಾರಿಕೆ ಪ್ರಮಾಣ (%)

1

ಭಾರತ ಸರ್ಕಾರ (ರೈಲ್ವೆ ಸಚಿವಾಲಯದ ಮೂಲಕ)

66.35

2

ಮಹಾರಾಷ್ಟ್ರ ಸರ್ಕಾರ

15.11

3

ಕರ್ನಾಟಕ ಸರ್ಕಾರ

10.30

4

ಗೋವಾ ಸರ್ಕಾರ

4.12

5

ಕೇರಳ ಸರ್ಕಾರ

4.12

ಪ್ರಸ್ತುತ, ಮಂಗಳೂರು - ಮುಂಬೈ ವಲಯವು 28 ಜೋಡಿ ರೈಲು ಸೇವೆಗಳನ್ನು ಒದಗಿಸುತ್ತಿದ್ದರೆ, ಮಂಗಳೂರು - ಮಡಗಾಂವ್ ವಲಯವು ಪ್ರಸ್ತುತ 33 ಜೋಡಿ ರೈಲು ಸೇವೆಗಳನ್ನು ಒದಗಿಸುತ್ತಿದೆ:

ಮಂಗಳೂರು - ಮುಂಬೈ ವಲಯದ ರೈಲು ಸೇವೆಗಳು:

ಕ್ರ.ಸಂ

ರೈಲು ಸಂಖ್ಯೆ

ರೈಲಿನ ಹೆಸರು

1

12431/12432

ತಿರುವನಂತಪುರಂ ಸೆಂಟ್ರಲ್ – ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್ ಪ್ರೆಸ್

2

12133/12134

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಟಿ) - ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್

3

12201/12202

ಲೋಕಮಾನ್ಯ ತಿಲಕ್ (ಟಿ) – ತಿರುವನಂತಪುರಂ ನಾರ್ತ್ ಗರೀಬ್ ರಥ್ ಎಕ್ಸ್ ಪ್ರೆಸ್

4

12217/12218

ತಿರುವನಂತಪುರಂ ನಾರ್ತ್ - ಚಂಡೀಗಢ ಕೇರಳ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್

5

12223/12224

ಲೋಕಮಾನ್ಯ ತಿಲಕ್ (ಟಿ) – ಎರ್ನಾಕುಲಂ ದುರಂತೋ ಎಕ್ಸ್ ಪ್ರೆಸ್

6

12283/12284

ಎರ್ನಾಕುಲಂ – ಹಜರತ್ ನಿಜಾಮುದ್ದೀನ್ ದುರಂತೋ ಎಕ್ಸ್ ಪ್ರೆಸ್

7

12483/12484

ತಿರುವನಂತಪುರಂ ನಾರ್ತ್ – ಅಮೃತಸರ ಜಂಕ್ಷನ್ ಎಕ್ಸ್ ಪ್ರೆಸ್

8

12617/12618

ಎರ್ನಾಕುಲಂ – ಹಜರತ್ ನಿಜಾಮುದ್ದೀನ್ ಮಂಗಳ ಲಕ್ಷದ್ವೀಪ ಎಕ್ಸ್ ಪ್ರೆಸ್

9

12619/12620

ಲೋಕಮಾನ್ಯ ತಿಲಕ್ (ಟಿ) - ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಎಕ್ಸ್ ಪ್ರೆಸ್

10

12977/12978

ಎರ್ನಾಕುಲಂ - ಅಜ್ಮೀರ್ ಮರು ಸಾಗರ್ ಎಕ್ಸ್ ಪ್ರೆಸ್

11

16311/16312

ಶ್ರೀ ಗಂಗಾನಗರ – ತಿರುವನಂತಪುರಂ ನಾರ್ತ್ ಎಕ್ಸ್ ಪ್ರೆಸ್

12

16333/16334

ವೆರಾವಲ್ – ತಿರುವನಂತಪುರಂ ಸೆಂಟ್ರಲ್ ಎಕ್ಸ್ ಪ್ರೆಸ್

13

16335/16336

ಗಾಂಧಿಧಾಮ್ – ನಾಗರಕೋಯಿಲ್ ಎಕ್ಸ್ ಪ್ರೆಸ್

14

16337/16338

ಓಖಾ – ಎರ್ನಾಕುಲಂ ಎಕ್ಸ್ ಪ್ರೆಸ್

15

16345/16346

ಲೋಕಮಾನ್ಯ ತಿಲಕ್ (ಟಿ) – ತಿರುವನಂತಪುರಂ ಸೆಂಟ್ರಲ್ ನೇತ್ರಾವತಿ ಎಕ್ಸ್ ಪ್ರೆಸ್

16

19259/19260

ತಿರುವನಂತಪುರಂ ನಾರ್ತ್ – ಭಾವನಗರ (ಟಿ) ಎಕ್ಸ್ ಪ್ರೆಸ್

17

19577/19578

ಜಾಮ್‌ನಗರ – ತಿರುನಲ್ವೇಲಿ ಎಕ್ಸ್ ಪ್ರೆಸ್

18

20909/20910

ತಿರುವನಂತಪುರಂ ನಾರ್ತ್ - ಪೋರ್‌ಬಂದರ್ ಎಕ್ಸ್ ಪ್ರೆಸ್

19

20923/20924

ತಿರುನಲ್ವೇಲಿ – ಗಾಂಧಿಧಾಮ್ ಹಮ್‌ಸಫರ್ ಎಕ್ಸ್ ಪ್ರೆಸ್

20

20931/20932

ತಿರುವನಂತಪುರಂ ನಾರ್ತ್ – ಇಂದೋರ್ ಎಕ್ಸ್ ಪ್ರೆಸ್

21

22113/22114

ಲೋಕಮಾನ್ಯ ತಿಲಕ್ (ಟಿ) – ತಿರುವನಂತಪುರಂ ನಾರ್ತ್ ಎಕ್ಸ್ ಪ್ರೆಸ್

22

22149/22150

ಎರ್ನಾಕುಲಂ - ಪುಣೆ ಎಕ್ಸ್ ಪ್ರೆಸ್

23

22475/22476

ಹಿಸಾರ್ – ಕೊಯಮತ್ತೂರು ಎಕ್ಸ್ ಪ್ರೆಸ್

24

22629/22630

ದಾದರ್ ಸೆಂಟ್ರಲ್ - ತಿರುನಲ್ವೇಲಿ ಎಕ್ಸ್ ಪ್ರೆಸ್

25

22633/22634

ತಿರುವನಂತಪುರಂ ಸೆಂಟ್ರಲ್ - ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್

26

22653/22654

ತಿರುವನಂತಪುರಂ ಸೆಂಟ್ರಲ್ – ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್

27

22655/22656

ಎರ್ನಾಕುಲಂ – ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್

28

22659/22660

ತಿರುವನಂತಪುರಂ ನಾರ್ತ್ - ಯೋಗ ನಗರಿ ರಿಷಿಕೇಶ ಎಕ್ಸ್ ಪ್ರೆಸ್

ಮಂಗಳೂರು - ಮಡಗಾಂವ್ ವಲಯದ ರೈಲು ಸೇವೆಗಳು:

ಕ್ರ.ಸಂ

ರೈಲು ಸಂಖ್ಯೆ

ರೈಲಿನ ಹೆಸರು

1

20645/20646

ಮಡಗಾಂವ್ – ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್

2

10107/10108

ಮಡಗಾಂವ್ – ಮಂಗಳೂರು ಮೆಮು (ಮೆಮು) ಎಕ್ಸ್‌ಪ್ರೆಸ್

3

10215/10216

ಮಡಗಾಂವ್ – ಎರ್ನಾಕುಲಂ ಎಕ್ಸ್‌ಪ್ರೆಸ್

4

11097/11098

ಪುಣೆ – ಎರ್ನಾಕುಲಂ ಪೂರ್ಣಾ ಎಕ್ಸ್‌ಪ್ರೆಸ್

5

12133/12134

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಟಿ) – ಮಂಗಳೂರು ಎಕ್ಸ್‌ಪ್ರೆಸ್

6

12201/12202

ಲೋಕಮಾನ್ಯ ತಿಲಕ್ (ಟಿ) – ತಿರುವನಂತಪುರಂ ನಾರ್ತ್ ಗರೀಬ್ ರಥ್ ಎಕ್ಸ್‌ಪ್ರೆಸ್

7

12217/12218

ತಿರುವನಂತಪುರಂ ನಾರ್ತ್ - ಚಂಡೀಗಢ ಕೇರಳ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್

8

12223/12224

ಲೋಕಮಾನ್ಯ ತಿಲಕ್ (ಟಿ) – ಎರ್ನಾಕುಲಂ ದುರಂತೋ ಎಕ್ಸ್‌ಪ್ರೆಸ್

9

12283/12284

ಎರ್ನಾಕುಲಂ - ನಿಜಾಮುದ್ದೀನ್ ದುರಂತೋ ಎಕ್ಸ್‌ಪ್ರೆಸ್

10

12431/12432

ತಿರುವನಂತಪುರಂ ಸೆಂಟ್ರಲ್ - ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್

11

12483/12484

ತಿರುವನಂತಪುರಂ ನಾರ್ತ್ - ಅಮೃತಸರ ಜಂಕ್ಷನ್ ಎಕ್ಸ್‌ಪ್ರೆಸ್

12

12617/12618

ಎರ್ನಾಕುಲಂ - ಹಜರತ್ ನಿಜಾಮುದ್ದೀನ್ ಮಂಗಳ ಲಕ್ಷದ್ವೀಪ ಎಕ್ಸ್‌ಪ್ರೆಸ್

13

12619/12620

ಲೋಕಮಾನ್ಯ ತಿಲಕ್ (ಟಿ) - ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಎಕ್ಸ್‌ಪ್ರೆಸ್

14

12977/12978

ಎರ್ನಾಕುಲಂ - ಅಜ್ಮೀರ್ ಮರು ಸಾಗರ್ ಎಕ್ಸ್‌ಪ್ರೆಸ್

15

16311/16312

ಶ್ರೀ ಗಂಗಾನಗರ – ತಿರುವನಂತಪುರಂ ನಾರ್ತ್ ಎಕ್ಸ್‌ಪ್ರೆಸ್

16

16333/16334

ವೆರಾವಲ್ – ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್

17

16335/16336

ಗಾಂಧಿಧಾಮ್ – ನಾಗರಕೋಯಿಲ್ ಎಕ್ಸ್‌ಪ್ರೆಸ್

18

16337/16338

ಓಖಾ – ಎರ್ನಾಕುಲಂ ಎಕ್ಸ್‌ಪ್ರೆಸ್

19

16345/16346

ಲೋಕಮಾನ್ಯ ತಿಲಕ್ (ಟಿ) – ತಿರುವನಂತಪುರಂ ಸೆಂಟ್ರಲ್ ನೇತ್ರಾವತಿ ಎಕ್ಸ್‌ಪ್ರೆಸ್

20

19259/19260

ತಿರುವನಂತಪುರಂ ನಾರ್ತ್ - ಭಾವನಗರ (ಟಿ) ಎಕ್ಸ್‌ಪ್ರೆಸ್

21

19577/19578

ತಿರುನಲ್ವೇಲಿ - ಜಾಮ್‌ನಗರ ಎಕ್ಸ್‌ಪ್ರೆಸ್

22

20909/20910

ತಿರುವನಂತಪುರಂ ನಾರ್ತ್ - ಪೋರ್‌ಬಂದರ್ ಎಕ್ಸ್‌ಪ್ರೆಸ್

23

20923/20924

ತಿರುನಲ್ವೇಲಿ - ಗಾಂಧಿಧಾಮ್ ಹಮ್‌ಸಫರ್ ಎಕ್ಸ್‌ಪ್ರೆಸ್

24

20931/20932

ತಿರುವನಂತಪುರಂ ನಾರ್ತ್ - ಇಂದೋರ್ ಎಕ್ಸ್‌ಪ್ರೆಸ್

25

22113/22114

ಲೋಕಮಾನ್ಯ ತಿಲಕ್ (ಟಿ) – ತಿರುವನಂತಪುರಂ ನಾರ್ತ್ ಎಕ್ಸ್‌ಪ್ರೆಸ್

26

22149/22150

ಎರ್ನಾಕುಲಂ - ಪುಣೆ ಎಕ್ಸ್‌ಪ್ರೆಸ್

27

22475/22476

ಹಿಸಾರ್ – ಕೊಯಮತ್ತೂರು ಎಕ್ಸ್‌ಪ್ರೆಸ್

28

22629/22630

ದಾದರ್ ಸೆಂಟ್ರಲ್ – ತಿರುನಲ್ವೇಲಿ ಎಕ್ಸ್‌ಪ್ರೆಸ್

29

22633/22634

ತಿರುವನಂತಪುರಂ ಸೆಂಟ್ರಲ್ - ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್

30

22653/22654

ತಿರುವನಂತಪುರಂ ಸೆಂಟ್ರಲ್ - ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್

31

22655/22656

ಎರ್ನಾಕುಲಂ - ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್

32

22659/22660

ಯೋಗ ನಗರಿ ರಿಷಿಕೇಶ – ತಿರುವನಂತಪುರಂ ನಾರ್ತ್ ಎಕ್ಸ್‌ಪ್ರೆಸ್

33

56615/56616

ಮಡಗಾಂವ್ – ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್

ಭಾರತೀಯ ರೈಲ್ವೆ ಜಾಲದಲ್ಲಿ ಪ್ರಸ್ತುತ 164 ವಂದೇ ಭಾರತ್ ರೈಲು ಸೇವೆಗಳು ಕಾರ್ಯಾಚರಣೆ ನಡೆಸುತ್ತಿವೆ. ಇವುಗಳಲ್ಲಿ, ರೈಲುಗಳ ಪ್ರಾರಂಭ ಅಥವಾ ಅಂತ್ಯದ (originating/terminating) ಆಧಾರದ ಮೇಲೆ ವಿವಿಧ ರಾಜ್ಯಗಳಿಗೆ ಈ ಕೆಳಗಿನಂತೆ ಸೇವೆಗಳನ್ನು ಒದಗಿಸಲಾಗುತ್ತಿದೆ:

· ಮಹಾರಾಷ್ಟ್ರ: ರಾಜ್ಯದ ವಿವಿಧ ನಿಲ್ದಾಣಗಳಿಗೆ 24 ವಂದೇ ಭಾರತ್ ಸೇವೆಗಳು ಲಭ್ಯವಿವೆ.

· ಕರ್ನಾಟಕ: ಕರ್ನಾಟಕದ ವಿವಿಧ ನಿಲ್ದಾಣಗಳಿಗೆ 22 ಸೇವೆಗಳು ಲಭ್ಯವಿವೆ.

· ಕೇರಳ: ಈ ರಾಜ್ಯದಲ್ಲಿ 6 ಸೇವೆಗಳು ಲಭ್ಯವಿವೆ.

· ಗೋವಾ: ಗೋವಾದಲ್ಲಿ 4 ಸೇವೆಗಳು ಲಭ್ಯವಿವೆ.

ಈ ಪಟ್ಟಿಯಲ್ಲಿ ಮಂಗಳೂರು-ಮಡಗಾಂವ್ ಮತ್ತು ಮಡಗಾಂವ್-ಮುಂಬೈ ನಿಲ್ದಾಣಗಳ ನಡುವೆ ಸಂಚರಿಸುವ ವಂದೇ ಭಾರತ್ ರೈಲುಗಳು ಸಹ ಸೇರಿವೆ.

ಕೊಂಕಣ ರೈಲ್ವೆಯ ವ್ಯಾಪ್ತಿಯಲ್ಲಿರುವ ಒಟ್ಟು 739 ಕಿಲೋಮೀಟರ್ ಮಾರ್ಗದಲ್ಲಿ, ರೋಹಾ-ವೀರ್ ಮತ್ತು ಮಡಗಾಂವ್-ಮಜೋರ್ಡಾ ವಿಭಾಗಗಳ ನಡುವಿನ ಸುಮಾರು 55 ಕಿಲೋಮೀಟರ್ ಮಾರ್ಗವನ್ನು ಈಗಾಗಲೇ ದ್ವಿಪಥಗೊಳಿಸಲಾಗಿದೆ. ಉಳಿದ 685 ಕಿಲೋಮೀಟರ್ ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸಲು ದ್ವಿಪಥಗೊಳಿಸುವ ಅಗತ್ಯವಿದೆ. ಇದಕ್ಕೆ ದೊಡ್ಡ ಪ್ರಮಾಣದ ಹೂಡಿಕೆಯ ಅಗತ್ಯವಿದ್ದು, ಎಲ್ಲಾ ಪಾಲುದಾರ ರಾಜ್ಯ ಸರ್ಕಾರಗಳ ಕೊಡುಗೆಯೂ ಬೇಕಾಗುತ್ತದೆ.

ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ ನಲ್ಲಿನ ಬಂಡವಾಳ ವೆಚ್ಚಕ್ಕಾಗಿ, ಆಯಾ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಕೊಡುಗೆಯನ್ನು ನೀಡುವಂತೆ ರೈಲ್ವೆ ಸಚಿವಾಲಯವು ಸಂಬಂಧಪಟ್ಟ ರಾಜ್ಯ ಸರ್ಕಾರಗಳನ್ನು ಕೋರಲಾಗಿದೆ.

ಈ ಮಧ್ಯೆ, ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಗುರುತಿಸಲಾದ ವಿಭಾಗಗಳ (ಸುಮಾರು 263 ಕಿ.ಮೀ.) ದ್ವಿಪಥಗೊಳಿಸುವಿಕೆಗೆ ಸಂಬಂಧಿಸಿದಂತೆ ಸವಿಸ್ತಾರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯವನ್ನು ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್  ಕೈಗೆತ್ತಿಕೊಂಡಿದೆ. ಇದಲ್ಲದೆ, ಯಾವುದೇ ರೈಲ್ವೆ ಯೋಜನೆಯ ಮಂಜೂರಾತಿಯು ಈ ಕೆಳಗಿನವುಗಳನ್ನು ಒಳಗೊಂಡಂತೆ ಹಲವು ಮಾನದಂಡಗಳು ಅಥವಾ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ:

ಯಾವುದೇ ರೈಲ್ವೆ ಯೋಜನೆಯ ಮಂಜೂರಾತಿಯು ಈ ಕೆಳಗಿನ ಮಾನದಂಡಗಳನ್ನು ಅವಲಂಬಿಸಿರುತ್ತದೆ:

  • ಉದ್ದೇಶಿತ ಮಾರ್ಗದಲ್ಲಿ ನಿರೀಕ್ಷಿತ ಸಂಚಾರದ ಪ್ರಮಾಣ ಮತ್ತು ಆ ಯೋಜನೆಯಿಂದ ಬರಬಹುದಾದ ಆದಾಯ.
  • ಯೋಜನೆಯು ಒದಗಿಸುವ ಮೊದಲ ಮತ್ತು ಕೊನೆಯ ಹಂತದ ಸಂಪರ್ಕ ವ್ಯವಸ್ಥೆ.
  • ಬಿಟ್ಟುಹೋದ ಪ್ರದೇಶಗಳನ್ನು ಜೋಡಿಸುವುದು ಮತ್ತು ಹೆಚ್ಚುವರಿ ಮಾರ್ಗವನ್ನು ಒದಗಿಸುವುದು.
  • ಅತಿಯಾದ ದಟ್ಟಣೆ ಇರುವ ಅಥವಾ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಮಾರ್ಗಗಳ ವಿಸ್ತರಣೆ .
  • ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಸಲ್ಲಿಸಿದ ಬೇಡಿಕೆಗಳು.
  • ರೈಲ್ವೆಯ ಕಾರ್ಯಾಚರಣೆಯ ಅಗತ್ಯತೆಗಳು.
  • ಸಾಮಾಜಿಕ-ಆರ್ಥಿಕ ಅಂಶಗಳು
  • ಒಟ್ಟಾರೆಯಾಗಿ ಅನುದಾನ ಅಥವಾ ನಿಧಿಯ ಲಭ್ಯತೆ.

ಲೋಕಸಭೆಯಲ್ಲಿ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ.

 

*****


(रिलीज़ आईडी: 2205310) आगंतुक पटल : 13