ರೈಲ್ವೇ ಸಚಿವಾಲಯ
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಹಬ್ಬದ ದಟ್ಟಣೆಯನ್ನು ನಿಭಾಯಿಸಲು ಭಾರತೀಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ ಆರಂಭ; ಈಗಾಗಲೇ 244 ಟ್ರಿಪ್‌ಗಳ ಘೋಷಣೆ
ಮುಂಬರುವ ದಿನಗಳಲ್ಲಿ ಇನ್ನಷ್ಟು ಟ್ರಿಪ್‌ಗಳ ಬಗ್ಗೆ ಮಾಹಿತಿ
प्रविष्टि तिथि:
18 DEC 2025 2:46PM by PIB Bengaluru
2025-26ರ ಕ್ರಿಸ್ ಮಸ್ ಮತ್ತು ಹೊಸ ವರ್ಷದ ಅವಧಿಯಲ್ಲಿ ನಿರೀಕ್ಷಿತ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು, ಭಾರತೀಯ ರೈಲ್ವೆಯು ಎಂಟು ವಲಯಗಳಲ್ಲಿ ವಿಶೇಷ ರೈಲುಗಳ ವ್ಯಾಪಕ ಕಾರ್ಯಾಚರಣೆಯನ್ನು ಯೋಜಿಸಿದೆ. ಇದುವರೆಗೆ ಒಟ್ಟು 244 ಸಂಚಾರಗಳ (trips) ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ರೈಲು ಸಂಚಾರಗಳ ಬಗ್ಗೆ ಮಾಹಿತಿ ನೀಡಲಾಗುವುದು.
2025–26ರ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ನಿಗದಿಪಡಿಸಲಾದ ರೈಲುಗಳು
|
ರೈಲ್ವೆ ವಲಯ
|
ಅಧಿಸೂಚಿತ ಸಂಚಾರಗಳು
|
|
ಮಧ್ಯ ರೈಲ್ವೆ
|
76
|
|
ಉತ್ತರ ರೈಲ್ವೆ
|
08
|
|
ದಕ್ಷಿಣ ಮಧ್ಯ ರೈಲ್ವೆ
|
26
|
|
ದಕ್ಷಿಣ ಪೂರ್ವ ಮಧ್ಯ ರೈಲ್ವೆ
|
24
|
|
ನೈರುತ್ಯ ರೈಲ್ವೆ
|
28
|
|
ವಾಯವ್ಯ ರೈಲ್ವೆ
|
06
|
|
ಪಶ್ಚಿಮ ರೈಲ್ವೆ
|
72
|
|
ಈಶಾನ್ಯ ಗಡಿ ರೈಲ್ವೆ
|
04
|
|
ಒಟ್ಟು
|
244
|
ಮುಂಬೈ–ಗೋವಾ (ಕೊಂಕಣ) ಕಾರಿಡಾರ್ ನಲ್ಲಿ, ಮುಂಬೈ CSMT / LTT ಮತ್ತು ಕರ್ಮಲಿ / ಮಡಗಾಂವ್ ನಡುವೆ ದೈನಂದಿನ ಮತ್ತು ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಇವು ಮಾರ್ಗದುದ್ದಕ್ಕೂ ಇರುವ ಪ್ರಮುಖ ನಿಲ್ದಾಣಗಳನ್ನು ಒಳಗೊಂಡಿದ್ದು, ಪ್ರಯಾಣಿಕರಿಗೆ ಹೆಚ್ಚುವರಿ ಸೀಟು ಮತ್ತು ಸ್ಲೀಪರ್ ಸೌಲಭ್ಯಗಳನ್ನು ಒದಗಿಸುತ್ತಿವೆ. ಅಂತೆಯೇ, ಮುಂಬೈ–ನಾಗಪುರ, ಪುಣೆ–ಸಂಗನೇರ್ ಮತ್ತು ಮಹಾರಾಷ್ಟ್ರದ ಇತರ ಮಾರ್ಗಗಳಲ್ಲಿನ ವಿಶೇಷ ಸೇವೆಗಳು ಸಾಮಾನ್ಯ ರೈಲುಗಳಲ್ಲಿನ ಅತಿಯಾದ ದಟ್ಟಣೆಯನ್ನು ತಪ್ಪಿಸಲು ಮತ್ತು ಹಬ್ಬದ ಅವಧಿಯಲ್ಲಿ ಅನುಕೂಲಕರ ಪ್ರಯಾಣದ ಆಯ್ಕೆಗಳನ್ನು ಒದಗಿಸಲು ಸಹಾಯ ಮಾಡುತ್ತಿವೆ. ಉತ್ತರ ಮತ್ತು ಪೂರ್ವ ಭಾರತದಾದ್ಯಂತ, ದೆಹಲಿ, ಹೌರಾ, ಲಕ್ನೋ ಮತ್ತು ಹತ್ತಿರದ ನಗರಗಳನ್ನು ಸಂಪರ್ಕಿಸುವ ಕಾರ್ಯನಿರತ ಕಾರಿಡಾರ್‌ಗಳಲ್ಲಿ ವಿಶೇಷ ರೈಲುಗಳನ್ನು ಓಡಿಸುವ ಮೂಲಕ ಮನೆಗೆ ಮರಳುವ ಅಥವಾ ಪ್ರವಾಸಿ ತಾಣಗಳಿಗೆ ತೆರಳುವ ದೂರದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ.
ದಕ್ಷಿಣ ಮತ್ತು ಮಧ್ಯದ ವಲಯಗಳಲ್ಲಿ, ಹೈದರಾಬಾದ್, ಬೆಂಗಳೂರು, ಮಂಗಳೂರು ಮತ್ತು ಇತರ ನಗರಗಳನ್ನು ಸಂಪರ್ಕಿಸುವ ಹೆಚ್ಚುವರಿ ಸೇವೆಗಳು ಈ ಪೀಕ್ ಅವಧಿಯಲ್ಲಿ ಪ್ರಯಾಣಿಕರ ಸುಗಮ ಪ್ರಯಾಣವನ್ನು ಖಚಿತಪಡಿಸುತ್ತವೆ. ನಿರ್ದಿಷ್ಟ ಉದಾಹರಣೆಗಳಲ್ಲಿ CSMT–ಕರ್ಮಲಿ, LTT–ತಿರುವನಂತಪುರಂ, ಪುಣೆ–ಸಂಗನೇರ್ ಮತ್ತು CSMT–ನಾಗಪುರ ಸೇರಿದ್ದು, ಇವುಗಳಲ್ಲಿ ಪ್ರತಿಯೊಂದೂ ಹಬ್ಬದ ದಟ್ಟಣೆಯನ್ನು ನಿಭಾಯಿಸಲು ಹಲವಾರು ಸಂಚಾರಗಳನ್ನು (trips) ನಡೆಸಲಿವೆ. ಈ ವಿಶೇಷ ರೈಲುಗಳನ್ನು ಓಡಿಸುವ ಮೂಲಕ, ಭಾರತೀಯ ರೈಲ್ವೆಯು ಹೆಚ್ಚಿನ ಸಾಮರ್ಥ್ಯ, ಸೌಕರ್ಯ ಮತ್ತು ಅನುಕೂಲತೆಯನ್ನು ಒದಗಿಸುತ್ತಿದೆ. ಇದು ಪ್ರಯಾಣಿಕರು ಯಾವುದೇ ಪ್ರಯಾಣದ ಒತ್ತಡವಿಲ್ಲದೆ ಕ್ರಿಸ್ ಮಸ್ ಮತ್ತು 2026ರ ಹೊಸ ವರ್ಷವನ್ನು ಆಚರಿಸಲು ಸಹಾಯ ಮಾಡುವುದಲ್ಲದೆ, ದೇಶದಾದ್ಯಂತ ಇರುವ ಕಡಲತೀರಗಳು, ನಗರಗಳು ಮತ್ತು ಪ್ರವಾಸಿ ತಾಣಗಳಿಗೆ ಅವರನ್ನು ಸಮರ್ಥವಾಗಿ ತಲುಪಿಸುತ್ತದೆ.
ಕ್ರಿಸ್‌ಮಸ್ ಮತ್ತು ಹೊಸ ವರ್ಷ 2025–26 ರ ವಲಯವಾರು ರೈಲು ವಿವರಗಳು
*****
(रिलीज़ आईडी: 2205999)
आगंतुक पटल : 6