ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ‘ಡಿ’ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಪ್ರಕಟಣಾ ದಿನಾಂಕ:
13 MAY 2026 2:01PM by PIB Bengaluru
ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು (SSC) ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಅಂದಾಜು 731 ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ‘ಡಿ’ ಹುದ್ದೆಗಳ ಭರ್ತಿಗಾಗಿ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತಿದೆ. ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಿತಿಯನ್ನು ಆಗಸ್ಟ್ 1, 2026 ಕ್ಕೆ ಅನ್ವಯಿಸುವಂತೆ ನಿಗದಿಪಡಿಸಲಾಗಿದ್ದು, ಗ್ರೇಡ್ ‘ಸಿ’ ಹುದ್ದೆಗಳಿಗೆ 18 ರಿಂದ 30 ವರ್ಷಗಳು ಮತ್ತು ಗ್ರೇಡ್ ‘ಡಿ’ ಹುದ್ದೆಗಳಿಗೆ 18 ರಿಂದ 27 ವರ್ಷಗಳ ಒಳಗಿರಬೇಕು ಹಾಗೂ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸಲು ಮೇ 15, 2026 ಕೊನೆಯ ದಿನಾಂಕವಾಗಿದ್ದು, ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವಿದ್ದು, ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ದಿವ್ಯಾಂಗ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ, ಈ ಪರೀಕ್ಷೆಗಳು ತಾತ್ಕಾಲಿಕವಾಗಿ ಜೂನ್ನಿಂದ ಆಗಸ್ಟ್ 2026 ರ ನಡುವೆ ನಡೆಯಲಿವೆ. ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://ssc.gov.in ಅಥವಾ ಕೆ.ಕೆ.ಆರ್ ಪ್ರಾದೇಶಿಕ ಕಚೇರಿಯ ವೆಬ್‌ಸೈಟ್ http://www.ssckkr.kar.nic.in ಗೆ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ 080-25502520 ಸಂಪರ್ಕಿಸಬಹುದು.
*****
(ಪ್ರಕಟಣೆ ಐ.ಡಿ.: 2260575)
ವಿಸಿಟರ್ ಕೌಂಟರ್ : 51