ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ


200 ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗಿ

प्रविष्टि तिथि: 21 AUG 2026 6:00PM by PIB Bengaluru

ಭಾರತದ ಚಂದ್ರಯಾನ-3 ನೌಕೆಯು ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿದ ಐತಿಹಾಸಿಕ ಮೈಲಿಗಲ್ಲಿನ ನೆನಪಿಗಾಗಿ, ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಶಾಲೆ-ಕಾಲೇಜುಗಳ ಸುಮಾರು 200 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ಕುರಿತ ಪ್ರಾತ್ಯಕ್ಷಿಕೆಗಳು, ಸಂವಾದಾತ್ಮಕ ಪ್ರಯೋಗಗಳು ಮತ್ತು ಸಂಶೋಧಕರೊಂದಿಗೆ ಚರ್ಚೆಯ ಮೂಲಕ ವಿದ್ಯಾರ್ಥಿಗಳು ಬಾಹ್ಯಾಕಾಶ ಹಾಗೂ ವಿಜ್ಞಾನ ಕ್ಷೇತ್ರದ ವೃತ್ತಿಪರ ಅವಕಾಶಗಳ ಬಗ್ಗೆ ಮಾಹಿತಿ ಪಡೆದರು. ಬ್ರಹ್ಮಾಂಡದ ಆರಂಭಿಕ ನಕ್ಷತ್ರಗಳ ಸಂಕೇತಗಳನ್ನು ಗುರುತಿಸಲು ಆರ್ಆರ್ಐ ಪ್ರಸ್ತಾಪಿಸಿರುವ ‘ಪ್ರತ್ಯುಷ್’ಬಾಹ್ಯಾಕಾಶ ದೂರದರ್ಶಕ ಯೋಜನೆಯು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಇದರ ಜೊತೆಗೆ ಪ್ರತ್ಯುಷ್ ಆಧಾರಿತ ಒಗಟುಗಳ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಚೆನ್ನೈನ ‘ಮ್ಯಾಂಗೋ ಎಜುಕೇಶನ್’ ಸಹಯೋಗದೊಂದಿಗೆ, ಸಂಸ್ಥೆಯ ಆವರಣದಲ್ಲಿ ದೂರದರ್ಶಕದ ಮೂಲಕ ವಿದ್ಯಾರ್ಥಿಗಳಿಗೆ ಸೂರ್ಯ ಮತ್ತು ಸೂರ್ಯನ ಮೇಲಿನ ಕಲೆಗಳನ್ನು ಸುರಕ್ಷಿತವಾಗಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಪ್ರೊ. ಸಿ. ವಿ. ರಾಮನ್ ಅವರ ವೈಯಕ್ತಿಕ ಸಂಗ್ರಹಗಳನ್ನು ಹೊಂದಿರುವ ಪ್ರಸಿದ್ಧ ರಾಮನ್ ಮ್ಯೂಸಿಯಂ ಮತ್ತು ಆರ್ಕೈವಲ್ ಗ್ಯಾಲರಿಯನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.

 

*****


(रिलीज़ आईडी: 2302045) आगंतुक पटल : 65