ಸಂವಹನ ಸಚಿವಾಲಯ
ಕರ್ನಾಟಕ ಅಂಚೆ ವೃತ್ತದಿಂದ ಜನವರಿ 19, 2027 ರಂದು ವೃತ್ತ ಮಟ್ಟದ ಪಿಂಚಣಿ ಅದಾಲತ್ ಆಯೋಜನೆ
ಪ್ರಕಟಣಾ ದಿನಾಂಕ:
07 OCT 2026 3:24PM by PIB Bengaluru
ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ಅಂಚೆ ವೃತ್ತವು ನಿವೃತ್ತರಾದ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರ ಪಿಂಚಣಿ ಸಂಬಂಧಿತ ಕುಂದುಕೊರತೆಗಳನ್ನು ಪರಿಹರಿಸಲು ಜನವರಿ 19, 2027 ರಂದು ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿರುವ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಅವರ ಕಚೇರಿಯಲ್ಲಿ ವೃತ್ತ ಮಟ್ಟದ ಪಿಂಚಣಿ ಅದಾಲತ್ ಅನ್ನು ಆಯೋಜಿಸಲು ಪ್ರಸ್ತಾಪಿಸಲಾಗಿದೆ.
ಈ ಹಿಂದೆ ಪ್ರಾದೇಶಿಕ ಮಟ್ಟದ ಪಿಂಚಣಿ ಅದಾಲತ್ ನಲ್ಲಿ ಅರ್ಜಿ ಸಲ್ಲಿಸಿ, ಸರಿಯಾದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳದ ಕುಂದುಕೊರತೆಗಳನ್ನು ಮಾತ್ರ ಈ ವೃತ್ತ ಮಟ್ಟದ ಪಿಂಚಣಿ ಅದಾಲತ್ ನಲ್ಲಿ ಪರಿಗಣಿಸಲಾಗುತ್ತದೆ. ಈ ಹಿಂದೆ ಪಿಂಚಣಿ ಅದಾಲತ್ಗೆ ಅರ್ಜಿ ಸಲ್ಲಿಸಿದವರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
ಅರ್ಹ ಪಿಂಚಣಿದಾರರು ಜನವರಿ 1, 2027 ಕ್ಕಿಂತ ಮೊದಲು ತಮ್ಮ ಕುಂದುಕೊರತೆಗಳ ಕುರಿತು ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಅಂಚೆ ಮೂಲಕ ಅಥವಾ accts.ka@indiapost.gov.in ಇಮೇಲ್ ವಿಳಾಸದ ಮೂಲಕ "ಸಹಾಯಕ ಲೆಕ್ಕಪತ್ರ ಅಧಿಕಾರಿ (ಲೆಕ್ಕಪತ್ರಗಳು ಮತ್ತು ಪಿಂಚಣಿ), ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿ, ಕರ್ನಾಟಕ ಸರ್ಕಲ್, ಬೆಂಗಳೂರು - 560001" ಇವರಿಗೆ ಕಳುಹಿಸಿಕೊಡಬಹುದು.
ಕಾನೂನು, ಉತ್ತರಾಧಿಕಾರ ಸಮಸ್ಯೆಗಳು ಹಾಗೂ ನೀತಿ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಈ ಅದಾಲತ್ ನಲ್ಲಿ ಸ್ವೀಕರಿಸಲಾಗುವುದಿಲ್ಲ. ಅಲ್ಲದೆ, ಗ್ರಾಮೀಣ ಡಾಕ್ ಸೇವಕರಾಗಿ ನಿವೃತ್ತರಾದವರು ಈ ಅದಾಲತ್ ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
*****
(ಪ್ರಕಟಣೆ ಐ.ಡಿ.: 2320096)
ವಿಸಿಟರ್ ಕೌಂಟರ್ : 24