ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಪಾನಿನ ಮಾಜಿ ಪ್ರಧಾನಮಂತ್ರಿ ದಿವಂಗತ ಶಿಂಜೊ ಅಬೆ ಅವರ ಪತ್ನಿ ಶ್ರೀಮತಿ ಅಕಿ ಅಬೆ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 08 OCT 2026 6:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನವದೆಹಲಿಯಲ್ಲಿ ದಿವಂಗತ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ಅವರ ಪತ್ನಿ ಶ್ರೀಮತಿ ಅಕಿ ಅಬೆ ಅವರನ್ನು ಭೇಟಿಯಾಗಿ ಭಾರತದೊಂದಿಗಿನ ಅವರ ನಿರಂತರ ಸಂಬಂಧಕ್ಕೆ ಆಳವಾದ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ-ಜಪಾನ್ ಸಂಬಂಧಗಳನ್ನು ಹೊಸ ದಿಗಂತಕ್ಕೆ ಏರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಆತ್ಮೀಯ ಸ್ನೇಹಿತ ಮತ್ತು ದಾರ್ಶನಿಕ ನಾಯಕ ಎಂದು ಪ್ರಧಾನಿ ಶಿಂಜೊ ಅಬೆ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸ್ಮರಿಸಿದರು.

ವಾರಣಾಸಿಯ ರುದ್ರಾಕ್ಷ ಸಮಾವೇಶ ಕೇಂದ್ರದಲ್ಲಿ ಅಬೆ ಸ್ಮಾರಕ ಕಾರಿಡಾರ್ ಉದ್ಘಾಟನೆಯು ಭಾರತ-ಜಪಾನ್ ದೇಶಗಳ ಸ್ನೇಹಕ್ಕೆ ಶಿಂಜೊ ಅಬೆ ಅವರ ಶಾಶ್ವತ ಕೊಡುಗೆಗೆ ಸೂಕ್ತವಾದ ಗೌರವವಾಗಿದೆ ಎಂದು ಶ್ರೀ ಮೋದಿಯವರು ಹೇಳಿದರು.

X ನ ಪೋಸ್ಟ್‌ನಲ್ಲಿ, ಶ್ರೀ ಮೋದಿಯವರು;

“ಜಪಾನಿನ ಮಾಜಿ ಪ್ರಧಾನಮಂತ್ರಿ ದಿವಂಗತ ಶಿಂಜೊ ಅಬೆ ಅವರ ಪತ್ನಿ ಶ್ರೀಮತಿ ಅಕೀ ಅಬೆ ಅವರನ್ನು ಭೇಟಿಯಾಗಲು ಸಂತೋಷವಾಯಿತು. ಭಾರತದೊಂದಿಗಿನ ಅವರ ನಿರಂತರ ಸಂಬಂಧವನ್ನು ನಾನು ತುಂಬಾ ಗೌರವಿಸುತ್ತೇನೆ.

ಅಬೆ ಸಾನ್ ಅವರು ಆತ್ಮೀಯ ಸ್ನೇಹಿತ ಮತ್ತು ದಾರ್ಶನಿಕ ನಾಯಕರಾಗಿದ್ದರು, ಅವರು ಭಾರತ-ಜಪಾನ್ ಸಂಬಂಧಗಳನ್ನು ಹೊಸ ದಿಗಂತಕ್ಕೆ ಏರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ನಿನ್ನೆ ವಾರಣಾಸಿಯ ರುದ್ರಾಕ್ಷ ಸಮಾವೇಶ ಕೇಂದ್ರದಲ್ಲಿ ನಡೆದ ಅಬೆ ಸ್ಮಾರಕ ಕಾರಿಡಾರ್ ಉದ್ಘಾಟನೆಯು ಭಾರತ-ಜಪಾನ್ ಸ್ನೇಹಕ್ಕೆ, ಅವರ ಶಾಶ್ವತ ಕೊಡುಗೆಗೆ ಸೂಕ್ತವಾದ ಗೌರವವಾಗಿದೆ.

@akie_official”

 

*****


(ಪ್ರಕಟಣೆ ಐ.ಡಿ.: 2321089) ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Manipuri , Bengali , Punjabi , Gujarati , Odia , Telugu , Malayalam