ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾಷಾ-ಆಧಾರಿತ ಡಿಜಿಟಲ್ ಪರಿವರ್ತನೆಯನ್ನು ಮುನ್ನಡೆಸಲು ಕರ್ನಾಟಕದಲ್ಲಿ 'ಭಾಷಿಣಿ ರಾಜ್ಯಂ' ಕಾರ್ಯಾಗಾರ ಆಯೋಜಿಸಿದ ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗ
ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಕಾರ್ಯಾಗಾರ ಆಯೋಜನೆ
ಪ್ರಕಟಣಾ ದಿನಾಂಕ:
09 OCT 2026 2:43PM by PIB Bengaluru
ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ (DIC) ಅಡಿಯಲ್ಲಿರುವ ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗವು (DIBD), ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ‘ಭಾಷಿಣಿ ರಾಜ್ಯಂ ಕಾರ್ಯಾಗಾರ – ಕರ್ನಾಟಕ ಅಧ್ಯಾಯ’ವನ್ನು ಆಯೋಜಿಸಿತು. ಈ ಕಾರ್ಯಾಗಾರವು ಡಿಜಿಟಲ್ ಆಡಳಿತವನ್ನು ಬಲಪಡಿಸುವಲ್ಲಿ, ಸುಲಭವಾಗಿ ಸಿಗುವ ಸಾರ್ವಜನಿಕ ಸೇವೆಗಳನ್ನು ಒದಗಿಸುವಲ್ಲಿ ಮತ್ತು ಕರ್ನಾಟಕದಾದ್ಯಂತ ಭಾರತೀಯ ಭಾಷಾ ತಂತ್ರಜ್ಞಾನಗಳ ಅಳವಡಿಕೆಯನ್ನು ಬೆಂಬಲಿಸುವಲ್ಲಿ ಬಹುಭಾಷಾ ಎಐ (AI) ನ ಪಾತ್ರವನ್ನು ಪರಿಶೋಧಿಸಿತು.
ಈ ಕಾರ್ಯಾಗಾರದಲ್ಲಿ ಕರ್ನಾಟಕ ಸರ್ಕಾರದ ಗೃಹ, ಇ-ಆಡಳಿತ ಮತ್ತು ಐಟಿ-ಬಿಟಿ ಸಚಿವರಾದ ಶ್ರೀ ಪ್ರಿಯಾಂಕ್ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಸರ್ಕಾರಿ ಅಧಿಕಾರಿಗಳು, ಭಾಷಾ ತಂತ್ರಜ್ಞಾನ ವ್ಯವಸ್ಥೆಯ ಪ್ರತಿನಿಧಿಗಳು ಮತ್ತು ಇತರ ಪಾಲುದಾರರು ಭಾಗವಹಿಸಿದ್ದರು. ಉದ್ಘಾಟನಾ ಗೋಷ್ಠಿಯು ದೀಪ ಬೆಳಗಿಸುವ ಸಾಂಪ್ರದಾಯಿಕ ಕಾರ್ಯಕ್ರಮ ಹಾಗೂ ಕರ್ನಾಟಕ ಸರ್ಕಾರ ಮತ್ತು ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗದ ಹಿರಿಯ ನಾಯಕರ ಭಾಷಣಗಳನ್ನು ಒಳಗೊಂಡಿತ್ತು.

ಈ ಕಾರ್ಯಾಗಾರವು ಭಾಷಿಣಿಯ ಭಾಷಾ-ಆಧಾರಿತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ಮತ್ತು ಅದರ ಬಹುಭಾಷಾ ಎಐ (AI) ವ್ಯವಸ್ಥೆಯ ಅವಲೋಕನವನ್ನು ಒದಗಿಸಿತು. ಪಾಲ್ಗೊಳ್ಳುವವರಿಗೆ ಭಾಷಿಣಿಯ ರಚನೆ, ಭಾಷಾ ತಂತ್ರಜ್ಞಾನದ ರಾಷ್ಟ್ರೀಯ ಕೇಂದ್ರ (NHLT), ಅದರ ಸೇವೆಗಳು, ಎಪಿಐಗಳು (APIs) ಮತ್ತು ಸಂಯೋಜನಾ ಸಾಮರ್ಥ್ಯಗಳು, ಹಾಗೂ ಸರ್ಕಾರಿ ಮತ್ತು ನಾಗರಿಕ ಸಂಬಂಧಿತ ಅಪ್ಲಿಕೇಶನ್‌ಗಳಲ್ಲಿ ಬಹುಭಾಷಾ ಎಐ ಸಂಯೋಜಿಸುವ ಅವಕಾಶಗಳ ಬಗ್ಗೆ ಪರಿಚಯಿಸಲಾಯಿತು.
ಭಾಷಿಣಿ ಉತ್ಪನ್ನಗಳು ಮತ್ತು ಬಳಕೆಯ ಪ್ರಕರಣಗಳ ಕುರಿತಾದ ಗೋಷ್ಠಿಯು ಆಡಳಿತ ಮತ್ತು ನಾಗರಿಕ ಸೇವೆಗಳಾದ್ಯಂತ ಬಹುಭಾಷಾ ಎಐ ಅನ್ವಯಿಕೆಗಳನ್ನು ಪ್ರದರ್ಶಿಸಿತು. ಈ ಗೋಷ್ಠಿಯು ಕೇಂದ್ರ ಮತ್ತು ರಾಜ್ಯ ಸಚಿವಾಲಯಗಳೊಂದಿಗಿನ ಸಹಯೋಗವನ್ನು ಎತ್ತಿಹಿಡಿಯಿತು ಮತ್ತು ಶಿಕ್ಷಣ, ಬ್ಯಾಂಕಿಂಗ್, ಆಡಳಿತ ಮತ್ತು ಉದ್ಯಮಶೀಲತೆಯಂತಹ ಕ್ಷೇತ್ರಗಳಲ್ಲಿ ಭಾಷಾ ತಂತ್ರಜ್ಞಾನಗಳ ಬಳಕೆಯನ್ನು ಪ್ರದರ್ಶಿಸುವ ಕೇಸ್ ಸ್ಟಡಿಗಳನ್ನು ಪ್ರಸ್ತುತಪಡಿಸಿತು.
ಭಾಷಿಣಿ ಉತ್ಪನ್ನಗಳು ಮತ್ತು ಬಳಕೆಯ ಪ್ರಕರಣಗಳ ಕುರಿತಾದ ಗೋಷ್ಠಿಯು ನಾಗರಿಕ-ಕೇಂದ್ರಿತ ಸೇವಾ ವಿತರಣೆ ಮತ್ತು ಕುಂದುಕೊರತೆ ನಿವಾರಣೆಯ ಮೇಲೆ ಗಮನ ಹರಿಸಿ, ಆಡಳಿತ ಮತ್ತು ನಾಗರಿಕ ಸೇವೆಗಳಾದ್ಯಂತ ಬಹುಭಾಷಾ ಎಐ ಅನ್ವಯಿಕೆಗಳನ್ನು ಪ್ರದರ್ಶಿಸಿತು. ಈ ಗೋಷ್ಠಿಯು ಕೇಂದ್ರ ಮತ್ತು ರಾಜ್ಯ ಸಚಿವಾಲಯಗಳೊಂದಿಗಿನ ಸಹಯೋಗವನ್ನು ಎತ್ತಿಹಿಡಿಯಿತು ಮತ್ತು ಶಿಕ್ಷಣ, ಬ್ಯಾಂಕಿಂಗ್, ಆಡಳಿತ, ಕಾನೂನು, ಆರೋಗ್ಯ ರಕ್ಷಣೆ, ಕುಂದುಕೊರತೆ ನಿವಾರಣೆ ಮತ್ತು ಉದ್ಯಮಶೀಲತೆಯಂತಹ ಕ್ಷೇತ್ರಗಳಾದ್ಯಂತ ಭಾಷಾ ತಂತ್ರಜ್ಞಾನಗಳ ಬಳಕೆಯನ್ನು ಪ್ರದರ್ಶಿಸುವ ಕೇಸ್ ಸ್ಟಡಿಗಳನ್ನು ಪ್ರಸ್ತುತಪಡಿಸಿತು. ಈ ಬಳಕೆಯ ಪ್ರಕರಣಗಳು ಬಹುಭಾಷಾ ಮತ್ತು ನಾಗರಿಕ-ಕೇಂದ್ರಿತ ಭಾಷಾ ತಂತ್ರಜ್ಞಾನಗಳು ಕರ್ನಾಟಕಕ್ಕೂ ಪ್ರಸ್ತುತವಾಗುವಂತೆ ಹೆಚ್ಚು ಸುಲಭವಾಗಿ ತಲುಪಬಹುದಾದ ಮತ್ತು ಸ್ಪಂದಿಸುವ ಸಾರ್ವಜನಿಕ ಸೇವೆಗಳನ್ನು ಹೇಗೆ ಬೆಂಬಲಿಸುತ್ತವೆ ಎಂಬುದನ್ನು ಪ್ರದರ್ಶಿಸಿದವು.
ಭಾಷಿಣಿ ಮಿತ್ರ ಗೋಷ್ಠಿಯು ಮಿತ್ರ (MITRA) ಕಾರ್ಯಕ್ರಮ ಮತ್ತು ದತ್ತಾಂಶ ಹಂಚಿಕೆ ಪ್ರಕ್ರಿಯೆ ಸೇರಿದಂತೆ ಸರ್ಕಾರಗಳು ಮತ್ತು ರಾಜ್ಯಗಳೊಂದಿಗಿನ ಸಹಭಾಗಿತ್ವವನ್ನು ಬಲಪಡಿಸುವುದರ ಮೇಲೆ ಗಮನ ಹರಿಸಿತು. ಚರ್ಚೆಗಳು ಸಮುದಾಯ್, ರಾಜ್ಯ ಭಾಷಾ ಮಿಷನ್‌ಗಳ ಉಪಕ್ರಮ, ಮತ್ತು ಭಾಷಾದಾನ್ ಅನ್ನು ಸಹ ಒಳಗೊಂಡಿದ್ದವು, ಭಾಷಾ ದತ್ತಾಂಶ ಕೊಡುಗೆ ಮತ್ತು ಅಳವಡಿಕೆಯಲ್ಲಿ ನಾಗರಿಕ ಮತ್ತು ಸಾಂಸ್ಥಿಕ ಭಾಗವಹಿಸುವಿಕೆಯನ್ನು ಎತ್ತಿಹಿಡಿಯುವ ಪ್ರತ್ಯಕ್ಷ ಪ್ರದರ್ಶನ ನಡೆಯಿತು.

ಕರ್ನಾಟಕ ಸರ್ಕಾರದ ಗೃಹ, ಇ-ಆಡಳಿತ ಮತ್ತು ಐಟಿ-ಬಿಟಿ ಸಚಿವರಾದ ಶ್ರೀ ಪ್ರಿಯಾಂಕ್ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, “ಕರ್ನಾಟಕವು ಒಂದು ರಾಜ್ಯವಾಗಿದೆ, ಆದರೆ ಪ್ರಾಂತ್ಯಗಳಾದ್ಯಂತ ಅದರ ಭಾಷಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯು ಬದಲಾಗುವುದರೊಂದಿಗೆ ಅದು ಹಲವು ಜಗತ್ತುಗಳೂ ಆಗಿದೆ. ರಾಜ್ಯದಾದ್ಯಂತ ಪ್ರವಾಸ ಮಾಡಿದ ನಾನು, ಭಾಷೆಗಳು ಮತ್ತು ಸಮುದಾಯಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೇಗೆ ವಿಕಸನಗೊಳ್ಳುತ್ತವೆ ಎಂಬುದನ್ನು ನೋಡಿದ್ದೇನೆ. ಈ ವೈವಿಧ್ಯತೆಯು ಜನರು ಅತ್ಯಂತ ಆರಾಮದಾಯಕವಾಗಿರುವ ಭಾಷೆಯಲ್ಲಿ ಡಿಜಿಟಲ್ ಸೇವೆಗಳನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಲು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಗೆ ಒಂದು ಪ್ರಮುಖ ಅವಕಾಶವನ್ನು ನೀಡುತ್ತದೆ. ಕರ್ನಾಟಕದ ದೃಢವಾದ ತಂತ್ರಜ್ಞಾನ ವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆಯಲ್ಲಿನ ಪ್ರತಿಭೆಯೊಂದಿಗೆ, ರಾಜ್ಯದಾದ್ಯಂತ ನಾಗರಿಕರಿಗೆ ಪ್ರಯೋಜನಕಾರಿಯಾಗುವ ಪ್ರಾಯೋಗಿಕ ಬಹುಭಾಷಾ ಪರಿಹಾರಗಳನ್ನು ನಿರ್ಮಿಸಲು ಭಾಷಿಣಿಯೊಂದಿಗೆ ಕೆಲಸ ಮಾಡುವ ಅಪಾರ ಸಾಮರ್ಥ್ಯವಿದೆ. ಜಾಗತಿಕ ಮಟ್ಟದಲ್ಲಿ ಭಾಷಿಣಿಯ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಮುಂಬರುವ ಬೆಂಗಳೂರು ಟೆಕ್ ಫೆಸ್ಟ್‌ನಲ್ಲಿ ಭಾಗವಹಿಸುವಂತೆ ನಾನು ಭಾಷಿಣಿ ತಂಡವನ್ನು ಆಹ್ವಾನಿಸಿದ್ದೇನೆ.” ಎಂದು ಹೇಳಿದರು.
ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಹರ್ಷ್ ಗುಪ್ತಾ, ಐ.ಎ.ಎಸ್. ಮಾತನಾಡಿ, “ಬಹುಭಾಷಾ ತಂತ್ರಜ್ಞಾನದ ಅಳವಡಿಕೆಯು ಸರ್ಕಾರಿ ಸೇವೆಗಳನ್ನು ನಾಗರಿಕರಿಗೆ ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮತ್ತು ಒಳಗೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕರ್ನಾಟಕದ ಭಾಷಿಕ ವೈವಿಧ್ಯತೆಯು, ವಿವಿಧ ಪ್ರದೇಶಗಳು ಮತ್ತು ಸಮುದಾಯಗಳಲ್ಲಿ ಜನರು ಸಂವಹನ ನಡೆಸುವ ವಿಧಾನವನ್ನು ಗುರುತಿಸುವ ಡಿಜಿಟಲ್ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದನ್ನು ವಿಶೇಷವಾಗಿ ಮಹತ್ವದನ್ನಾಗಿ ಮಾಡುತ್ತದೆ. ಭಾಷಿಣಿ ರಾಜ್ಯಂ ಕಾರ್ಯಾಗಾರವು ಸರ್ಕಾರಿ ಇಲಾಖೆಗಳು, ತಂತ್ರಜ್ಞಾನ ಪಾಲುದಾರರು ಮತ್ತು ವಿಶಾಲವಾದ ವ್ಯವಸ್ಥೆಗೆ ಪ್ರಾಯೋಗಿಕ ಬಳಕೆಯ ಪ್ರಕರಣಗಳನ್ನು ಗುರುತಿಸಲು ಹಾಗೂ ನಾಗರಿಕ-ಕೇಂದ್ರಿತ ಸಾರ್ವಜನಿಕ ಸೇವೆಗಳಲ್ಲಿ ಭಾಷಾ ತಂತ್ರಜ್ಞಾನಗಳನ್ನು ಸಂಯೋಜಿಸುವ ಅವಕಾಶಗಳನ್ನು ಅನ್ವೇಷಿಸಲು ಅತ್ಯಮೂಲ್ಯವಾದ ವೇದಿಕೆಯನ್ನು ಒದಗಿಸುತ್ತದೆ.” ಎಂದು ಹೇಳಿದರು.
ಇಡಿಸಿಎಸ್ (EDCS) ನಿರ್ದೇಶಕರಾದ ಶ್ರೀ ಹರ್ಷಲ್ ಭೋಯರ್ ನಾರಾಯಣರಾವ್, ಐ.ಎ.ಎಸ್. ಮಾತನಾಡಿ, “ಸಾರ್ವಜನಿಕ ಸೇವಾ ವಿತರಣೆಯನ್ನು ಬಲಪಡಿಸಲು ಮತ್ತು ನಾಗರಿಕರ ಅನುಭವಗಳನ್ನು ಸುಧಾರಿಸಲು ಕರ್ನಾಟಕವು ನಿರಂತರವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಭಾಷೆಯು ಈ ಪಯಣದ ಪ್ರಮುಖ ಭಾಗವಾಗಿದೆ, ಮತ್ತು ಬಹುಭಾಷಾ ತಂತ್ರಜ್ಞಾನವು ಡಿಜಿಟಲ್ ಸೇವೆಗಳನ್ನು ಹೆಚ್ಚು ಸುಲಭವಾಗಿ ಸಿಗುವಂತೆ ಮತ್ತು ಒಳಗೊಳ್ಳುವಂತೆ ಮಾಡಲು ನೆರವಾಗುತ್ತದೆ. ಭಾಷಿಣಿ ರಾಜ್ಯಂ ಕಾರ್ಯಾಗಾರವು ಪ್ರಾಯೋಗಿಕ ಬಳಕೆಯ ಪ್ರಕರಣಗಳನ್ನು ಅನ್ವೇಷಿಸಲು, ಭಾಷಾ ಎಐ (AI) ನ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಕರ್ನಾಟಕದ ಜನರಿಗೆ ಪ್ರಸ್ತುತವಾಗಿರುವ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಮತ್ತು ತಂತ್ರಜ್ಞಾನ ವ್ಯವಸ್ಥೆಯ ನಡುವೆ ಬಲವಾದ ಸಹಯೋಗವನ್ನು ನಿರ್ಮಿಸಲು ಅವಕಾಶವನ್ನು ಒದಗಿಸುತ್ತದೆ.” ಎಂದು ಹೇಳಿದರು.
ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗದ ಸಿಇಒ ಶ್ರೀ ಅಮಿತಾಭ್ ನಾಗ್ ಮಾತನಾಡಿ, “ತಂತ್ರಜ್ಞಾನವು ಏನನ್ನು ಸಾಧಿಸಬಲ್ಲದು ಎಂಬುದನ್ನು ಕರ್ನಾಟಕವು ಜಗತ್ತಿಗೆ ತೋರಿಸಿಕೊಟ್ಟಿದೆ. ಈಗ ಆ ತಾಂತ್ರಿಕ ಶಕ್ತಿಯನ್ನು ಭಾರತದ ಭಾಷಿಕ ವೈವಿಧ್ಯತೆಯ ಶ್ರೀಮಂತಿಕೆಯೊಂದಿಗೆ ಒಂದೆಡೆ ತರುವ ಅವಕಾಶ ನಮ್ಮ ಮುಂದಿದೆ. ಭಾಷಿಣಿಯನ್ನು ಲ್ಯಾಂಗ್ವೇಜ್ ಡಿಪಿಐ (Language DPI) ಆಗಿ ನಿರ್ಮಿಸಲಾಗುತ್ತಿದ್ದು, ಇಲ್ಲಿ ತಂತ್ರಜ್ಞಾನ, ದತ್ತಾಂಶ ಸಮೂಹಗಳು (datasets), ಎಪಿಐಗಳು, ಸಂಶೋಧನೆ ಮತ್ತು ನೈಜ-ಪ್ರಪಂಚದ ಬಳಕೆಯ ಪ್ರಕರಣಗಳು ಒಂದೇ ವ್ಯವಸ್ಥೆಯಾಗಿ ಒಟ್ಟಾಗಿ ಬರುತ್ತವೆ. ಈ ಪಯಣದಲ್ಲಿ ಕರ್ನಾಟಕವು ಪ್ರಮುಖ ಪಾತ್ರ ವಹಿಸಬೇಕಾಗಿದೆ. ಅರ್ಥಪೂರ್ಣ ಬಳಕೆಯ ಪ್ರಕರಣಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಮೂಲಕ, ಭಾಷಾ ದತ್ತಾಂಶವನ್ನು ಬಲಪಡಿಸುವ ಮೂಲಕ ಮತ್ತು ಡೆವಲಪರ್‌ಗಳು, ಸಂಶೋಧಕರು ಹಾಗೂ ಭಾಷಾ ಸಮುದಾಯಗಳನ್ನು ತೊಡಗಿಸಿಕೊಳ್ಳುವ ಮೂಲಕ, ನಾವು ನಿಜವಾದ ಭಾರತೀಯ, ವಿಸ್ತರಿಸಬಹುದಾದ ಮತ್ತು ಜನರು ಮಾತನಾಡುವ, ಸಂವಹನ ನಡೆಸುವ ಹಾಗೂ ಡಿಜಿಟಲ್ ಸೇವೆಗಳನ್ನು ಪಡೆಯುವ ವಿಧಾನಕ್ಕೆ ಸೂಕ್ತವಾದ ಭಾಷಾ ತಂತ್ರಜ್ಞಾನಗಳನ್ನು ನಿರ್ಮಿಸಬಹುದು.” ಎಂದು ಹೇಳಿದರು.
ಈ ಕಾರ್ಯಾಗಾರವು ಭಾಷಿಣಿ ಸೇವೆಗಳು ಮತ್ತು ಕೊಡುಗೆಗಳ ಕುರಿತಾದ ಗೋಷ್ಠಿಯನ್ನೂ ಒಳಗೊಂಡಿತ್ತು, ಇದು ಬಹುಭಾಷಾ ಅನುವಾದ, ಟ್ರಾನ್ಸ್‌ಕ್ರಿಪ್ಷನ್, ಸ್ಪೀಚ್-ಟು-ಸ್ಪೀಚ್, ವೀಡಿಯೊ ಅನುವಾದ, ಭಾಷಾ ಮಾದರಿ ಎಪಿಐಗಳು ಮತ್ತು ಪ್ರತಿಕ್ರಿಯೆ ವ್ಯವಸ್ಥೆಗಳನ್ನು (feedback mechanisms) ಒಳಗೊಂಡಿತ್ತು. ಈ ಗೋಷ್ಠಿಯು ಭಾಷಿಣಿ ವೇದಿಕೆಯ ಮೇಲೆ ಹೊಸ ಪರಿಹಾರಗಳನ್ನು ನಿರ್ಮಿಸಲು ಡೆವಲಪರ್‌ಗಳು, ಸಂಶೋಧಕರು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಇರುವ ಅವಕಾಶಗಳನ್ನು, ಭಾಷಾ ತಂತ್ರಜ್ಞಾನದಲ್ಲಿ ವ್ಯಾಪಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದ ಹ್ಯಾಕಥಾನ್‌ಗಳು ಮತ್ತು ಆವಿಷ್ಕಾರ ಕಾರ್ಯಕ್ರಮಗಳೊಂದಿಗೆ ಎತ್ತಿಹಿಡಿಯಿತು.
ಭಾಷಿಣಿ ಪ್ರವಕ್ತಾ ಗೋಷ್ಠಿಯು ಜ್ಞಾನ ಹಂಚಿಕೆ, ಸಂಶೋಧನೆ ಮತ್ತು ಸ್ಟಾರ್ಟ್‌ಅಪ್ ತೊಡಗಿಸಿಕೊಳ್ಳುವಿಕೆಯ ಮೂಲಕ ಎನ್‌ಎಲ್‌ಪಿ (NLP) ಮತ್ತು ಎಐ (AI) ನಲ್ಲಿ ಸಹಯೋಗವನ್ನು ಬಲಪಡಿಸುವುದರ ಮೇಲೆ ಗಮನ ಹರಿಸಿತು. ಚರ್ಚೆಗಳು ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತು ವಿಚಾರಸಂಕಿರಣಗಳು, ಭಾಷಾ ದತ್ತಾಂಶ ಸಂಪನ್ಮೂಲಗಳಿಗಾಗಿ ಉದ್ದೇಶಿತ ಜಾಗೃತಿ, ಸ್ಟಾರ್ಟ್‌ಅಪ್ ತೊಡಗಿಸಿಕೊಳ್ಳುವಿಕೆ ಮತ್ತು ಕರ್ನಾಟಕದ ಸಂಸ್ಕೃತಿ ಹಾಗೂ ಪ್ರಮುಖ ವ್ಯಕ್ತಿತ್ವಗಳನ್ನು ಆಚರಿಸುವತ್ತ ಗಮನ ಹರಿಸಿದ ಭಾಷಿಣಿ ಉತ್ಸವವನ್ನು ಒಳಗೊಂಡಿದ್ದವು.

ಬಳಕೆಯ ಪ್ರಕರಣಗಳ ಚರ್ಚೆಗಳ ಕುರಿತಾದ ಸಂವಾದಾತ್ಮಕ 'ಓಪನ್-ಮೈಕ್' (open-mic) ಗೋಷ್ಠಿಯೊಂದಿಗೆ ಈ ಕಾರ್ಯಾಗಾರವು ಮುಕ್ತಾಯಗೊಂಡಿತು, ಇದು ಪಾಲ್ಗೊಳ್ಳುವವರಿಗೆ ಬಹುಭಾಷಾ ಎಐ ನ ಸಂಭಾವ್ಯ ಅನ್ವಯಿಕೆಗಳನ್ನು ಗುರುತಿಸಲು ಮತ್ತು 'ಲೋ-ಹ್ಯಾಂಗಿಂಗ್-ಫ್ರೂಟ್' (low-hanging-fruit) ವಿಧಾನದ ಮೂಲಕ ತಕ್ಷಣದ ಅಳವಡಿಕೆಗಾಗಿ ಇರುವ ಅವಕಾಶಗಳನ್ನು ಅನ್ವೇಷಿಸಲು ಅವಕಾಶವನ್ನು ಒದಗಿಸಿತು.
*****
(ಪ್ರಕಟಣೆ ಐ.ಡಿ.: 2321274)
ವಿಸಿಟರ್ ಕೌಂಟರ್ : 30