ರೈಲ್ವೇ ಸಚಿವಾಲಯ
azadi ka amrit mahotsav

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವರಾದ ಶ್ರೀ. ವಿ ಸೋಮಣ್ಣ ಅವರಿಂದ ತುಮಕೂರು–ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ತಪಾಸಣೆ

ಪ್ರಕಟಣಾ ದಿನಾಂಕ: 07 NOV 2026 7:26PM by PIB Bengaluru

ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಇಂದು ತುಮಕೂರು–ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ಭಾಗವಾಗಿರುವ ಪಾವಗಡ- ಕೊತ್ತಾಲಂ-ಮಡಕಸಿರ-ಮಧುಗಿರಿ- ಕೊರಟಗೆರೆ (78 ಕಿ.ಮೀ.) ಹೊಸ ರೈಲು ಮಾರ್ಗದ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವರು ಕೊರಟಗೆರೆ, ಮಧುಗಿರಿ, ಬೇಡತ್ತೂರು, ಮಡಕಸಿರ ಮತ್ತು ಕೊತ್ತಾಲಂಗಳಲ್ಲಿ ರೈಲು ನಿಲ್ದಾಣಗಳ ಕಾಮಗಾರಿಗಳನ್ನು ಪರಿಶೀಲಿಸಿದರು. ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಒಟ್ಟು 207 ಕಿ.ಮೀ. ಉದ್ದದ ತುಮಕೂರು–ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯಲ್ಲಿ ಇದುವರೆಗೆ 110 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಇದರಲ್ಲಿ ದೊಡ್ಡಹಳ್ಳಿ–ರಾಯದುರ್ಗ ನಡುವಿನ 83 ಕಿ.ಮೀ. ರೈಲು ಮಾರ್ಗವನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಅಲ್ಲದೆ, ತುಮಕೂರು–ಊರುಕೆರೆ (11 ಕಿ.ಮೀ.) ಹಾಗೂ ದೊಡ್ಡಹಳ್ಳಿ–ಪಾವಗಡ (16 ಕಿ.ಮೀ.) ನಡುವಿನ ಕಾಮಗಾರಿಗಳು ಪೂರ್ಣಗೊಂಡಿದ್ದು, ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರು (CCRS) ಶಾಸನಬದ್ಧ ಸುರಕ್ಷತಾ ಪರಿಶೀಲನೆಯನ್ನು ಮಾಡಿದ್ದಾರೆ.

ಈ ಪರಿವೀಕ್ಷಣೆಯ ಸಂದರ್ಭದಲ್ಲಿ ಶ್ರೀ ಪ್ರಸಾದ್, ಮುಖ್ಯ ಇಂಜಿನಿಯರ್, (ನಿರ್ಮಾಣ); ಶ್ರೀ ಸೂರಜ್ ಕುಮಾರ್, ಉಪ ಮುಖ್ಯ ಅಭಿಯಂತರರು (ನಿರ್ಮಾಣ); ಹಾಗೂ ಇತರ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

 

*****


(ಪ್ರಕಟಣೆ ಐ.ಡಿ.: 2334013) ವಿಸಿಟರ್ ಕೌಂಟರ್ : 36