ಪ್ರಕಟಣಾ ದಿನಾಂಕ:
12 NOV 2026 7:48PM by PIB Bengaluru
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ನವೆಂಬರ್ 13, 2026 ರಂದು ಉಡುಪಿಯ ಆಕಾಶವಾಣಿ ಎಫ್ಎಂ ಕೇಂದ್ರದಲ್ಲಿ ಹೊಸ 1 ಕಿ.ವ್ಯಾ. ಎಫ್ಎಂ ಟ್ರಾನ್ಸಮೀಟರ್ ಉದ್ಘಾಟಿಸಿಲಿದ್ದು, ಅದರ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸಾರ್ವಜನಿಕ ಪ್ರಸಾರ ಕ್ಷೇತ್ರದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಲಿದೆ.

ಈ ಉನ್ನತ ಶ್ರೇಣಿಯ ಟ್ರಾನ್ಸಮೀಟರ್ ಲೋಕಾರ್ಪಣೆಯು ಆಕಾಶವಾಣಿಯ ಪ್ರಸಾರ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದ್ದು, ಉಡುಪಿ ವಲಯದ ಶೋತೃಗಳಿಗೆ ಉತ್ತಮ ಗುಣಮಟ್ಟದ ಧ್ವನಿ ಸ್ಪಷ್ಟತೆ ಮತ್ತು ಹೆಚ್ಚು ವಿಸ್ತೃತ ವ್ಯಾಪ್ತಿಯನ್ನು ಒದಗಿಸಲಿದೆ.

ನಾಳೆಯ ಉದ್ಘಾಟನೆಗೂ ಮುನ್ನ, ಸಂಸದರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಅವರು, ಚೆನ್ನೈನ ಆಕಾಶವಾಣಿ ಮತ್ತು ದೂರದರ್ಶನದ ಹೆಚ್ಚುವರಿ ಮಹಾನಿರ್ದೇಶಕರು ಶ್ರೀಮತಿ ವಾಸುಕಿ ಅವರು, ದೆಹಲಿಯ ಆಕಾಶವಾಣಿ ಮಹಾನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ವಿಧಾನಸಭಾ ಶಾಸಕರು ಕೇಂದ್ರಕ್ಕೆ ಭೇಟಿ ನೀಡಿ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು.


ಉದ್ಘಾಟನೆಗೆ ತಾಂತ್ರಿಕ ಸಿದ್ಧತೆಗಳು ಮತ್ತು ಕಾರ್ಯಾಚರಣೆಯ ಸನ್ನದ್ಧತೆ ಸರಾಗವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಅವರ ಜಂಟಿ ಪರಿಶೀಲನೆ ಕೇಂದ್ರೀಕೃತವಾಗಿತ್ತು. ಪ್ರಾದೇಶಿಕ ಪ್ರಸಾರ ಜಾಲಗಳನ್ನು ಆಧುನೀಕರಿಸುವ ರಾಷ್ಟ್ರೀಯ ಬದ್ಧತೆಯ ಭಾಗವಾಗಿ ಈ ಬೆಳವಣಿಗೆಯಾಗಿದ್ದು, ಉನ್ನತ ಗುಣಮಟ್ಟದ ಸಾರ್ವಜನಿಕ ಸೇವಾ ಮಾಧ್ಯಮವು ಸ್ಪಷ್ಟ ಪ್ರಸಾರದೊಂದಿಗೆ ಸಮುದಾಯದ ಪ್ರತಿ ಮೂಲೆಗೂ ತಲುಪಿಸುವ ಗುರಿ ಹೊಂದಿದೆ.
*****