ಪ್ರಕಟಣಾ ದಿನಾಂಕ:
13 NOV 2026 6:11PM by PIB Bengaluru
ಕೇಂದ್ರ ವಾರ್ತಾ ಮತ್ತು ಪ್ರಸಾರ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಮಂಗಳೂರು ಆಕಾಶವಾಣಿಯ ಉಡುಪಿಯ ನೂತನ ಒಂದು ಕಿಲೋ ವ್ಯಾಟ್ ಸಾಮರ್ಥ್ಯದ (101.9 ಮೆಗಾಹರ್ಟ್ಸ್) ಎಫ್.ಎಂ ಪ್ರೇಷಕವನ್ನು ಇಂದು ಉದ್ಘಾಟಿಸಿದರು.

ನೂತನ ಆಕಾಶವಾಣಿ ಎಫ್ಎಂ ಪ್ರಸಾರ ಕೇಂದ್ರವು 1 ಕಿಲೋ ವ್ಯಾಟ್ ಸಾಮರ್ಥ್ಯದ (101.9 MHz) ಎಫ್ಎಂ ಟ್ರಾನ್ಸ್ಮಿಷನ್ ಕೇಂದ್ರವನ್ನು ಸುಮಾರು ₹285 ಲಕ್ಷಗಳಲ್ಲಿ ನಿರ್ಮಿಸಲಾಗಿದ್ದು, ಸುಮಾರು 30ಕಿ.ಮೀ. ಏರಿಯಲ್ ವ್ಯಾಪ್ತಿಯಲ್ಲಿ ತರಂಗಾಂತರ ಹೊಂದಿರಲಿದೆ.

ಈ ವೇಳೆ ಸಚಿವರು ಮಾತನಾಡಿ, ಕರಾವಳಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಸರ್ವರ ಕಲ್ಯಾಣ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು. ಸಂಸದರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಎಫ್.ಎಂ ಪ್ರೇಷಕದ ಬಹುದಿನದ ಬೇಡಿಕೆ ಹಾಗೂ ನಿರೀಕ್ಷೆ ಈಡೇರಿದ ಬಗ್ಗೆ ಸಂತಸ ಮತ್ತು ಹೆಮ್ಮೆ ಇದೆ ಎಂದರು.

ಈ ಸಂದರ್ಭದಲ್ಲಿ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಆಕಾಶವಾಣಿಯ ಮಹಾನಿರ್ದೇಶಕರಾದ ಶ್ರೀ ರಾಜೀವ್ ಕುಮಾರ್ ಜೈನ್, ಉಪ ಮಹಾನಿರ್ದೇಶಕರಾದ ಶ್ರೀಮತಿ ಎಂ.ವಾಸುಕಿ, ಆಕಾಶವಾಣಿ ಮಂಗಳೂರು ಕೇಂದ್ರದ ಆಡಳಿತ, ತಾಂತ್ರಿಕ ಮತ್ತು ಕಾರ್ಯಕ್ರಮ ವಿಭಾಗದ ಅಧಿಕಾರಿಗಳು, ಬ್ರಹ್ಮಾವರ ಪ್ರಸರಣ ಕೇಂದ್ರದ ಅಧಿಕಾರಿಗಳು ಪಾಲ್ಗೊಂಡಿದ್ದರು.
*****