ಸಂವಹನ ಸಚಿವಾಲಯ
azadi ka amrit mahotsav

ಪಿಎಂ-ವಾಣಿ ಯೋಜನೆ: ಕೈಗೆಟುಕುವ ದರದಲ್ಲಿ ಸಾರ್ವಜನಿಕ ವೈ-ಫೈ ಸೌಲಭ್ಯದ ವಿಸ್ತರಣೆ ಮತ್ತು ಸ್ಥಳೀಯ ಉದ್ಯಮಿಗಳ ಸಬಲೀಕರಣ

ಪ್ರಕಟಣಾ ದಿನಾಂಕ: 20 NOV 2026 7:28PM by PIB Bengaluru

ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯು (DoT), ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್‌ಗಳ ಮೂಲಕ ದೇಶಾದ್ಯಂತ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ವಿಸ್ತರಿಸಲು 'ಪ್ರಧಾನ ಮಂತ್ರಿಗಳ ವೈ-ಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್‌ಫೇಸ್' (PM-WANI) ಯೋಜನೆಯನ್ನು ಉತ್ತೇಜಿಸುತ್ತಿದೆ. ಭಾರತದ ಡಿಜಿಟಲ್ ಸಂವಹನ ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು ಕೈಗೆಟುಕುವ ದರದಲ್ಲಿ ಬ್ರಾಡ್‌ಬ್ಯಾಂಡ್ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಪಿಎಂ-ವಾಣಿ ಅಡಿಯಲ್ಲಿ ಸ್ಥಳೀಯ ಉದ್ಯಮಿಗಳು, ಸಣ್ಣ ಅಂಗಡಿಯವರು ಮತ್ತು ಇತರ ಸಂಸ್ಥೆಗಳಿಗೆ ವಿಕೇಂದ್ರೀಕೃತ ಹಾಗೂ ವಿಸ್ತರಿಸಬಹುದಾದ ಮಾದರಿಯ ಮೂಲಕ ಸಾರ್ವಜನಿಕ ವೈ-ಫೈ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಇದು ಡಿಜಿಟಲ್ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದರ ಜೊತೆಗೆ, ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಸಣ್ಣ ವ್ಯಾಪಾರಗಳಿಗೆ ಹೆಚ್ಚುವರಿ ಆದಾಯದ ಮೂಲಗಳನ್ನು ತೆರೆಯಲು ಪ್ರಯತ್ನಿಸುತ್ತದೆ.

ನಾಗರಿಕರು ಮತ್ತು ಸ್ಥಳೀಯ ಉದ್ಯಮಿಗಳಿಗೆ ಆಗುವ ಪ್ರಯೋಜನಗಳು

ಮೊಬೈಲ್ ಬ್ರಾಡ್‌ಬ್ಯಾಂಡ್ ಜೊತೆಗೆ ಪರಿಣಾಮಕಾರಿ ಸಂಪರ್ಕ ಪರ್ಯಾಯವನ್ನು ನೀಡುವ ಮೂಲಕ, ಪಿಎಂ-ವಾಣಿ ಹತ್ತಿರದ ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್‌ಗಳ ಮೂಲಕ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುತ್ತದೆ. ಈ ವ್ಯವಸ್ಥೆಯು ವಿಶೇಷವಾಗಿ ಸಾರ್ವಜನಿಕ ಸ್ಥಳಗಳು, ವಾಣಿಜ್ಯ ವಲಯಗಳು, ಹೊರವಲಯದ ಪ್ರದೇಶ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ.

ಪಿಎಂ-ವಾಣಿ ವ್ಯವಸ್ಥೆಯಲ್ಲಿ ಭಾಗವಹಿಸುವಿಕೆಗೆ ಉತ್ತೇಜನ

ಆಸಕ್ತ ಪಾಲುದಾರರು, ಯೋಜನೆಯ ಮಾರ್ಗಸೂಚಿ, ನೋಂದಣಿ ಪ್ರಕ್ರಿಯೆ, ಕೇಂದ್ರೀಯ ನೋಂದಣಿ (Central Registry) ಮತ್ತು ಸಂಬಂಧಿತ ವಿವರಗಳನ್ನು ಅಧಿಕೃತ ಪಿಎಂ-ವಾಣಿ ಪೋರ್ಟಲ್ ಮೂಲಕ ಪಡೆಯಬಹುದು.

ಅಧಿಕೃತ ವೆಬ್‌ಸೈಟ್: https://pmwani.gov.in/wani

 

*****


(ಪ್ರಕಟಣೆ ಐ.ಡಿ.: 2340453) ವಿಸಿಟರ್ ಕೌಂಟರ್ : 11