• Skip to Content
  • Sitemap
  • Advance Search
Farmer's Welfare

ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್

ಗ್ರಾಮೀಣ ಸಮುದಾಯಗಳಿಗೆ ಸಬಲೀಕರಣಕ್ಕಾಗಿ ಒಂದು ನೀಲನಕ್ಷೆ

Posted On: 23 OCT 2025 10:09AM

ಮಾರ್ಗಸೂಚಿಗಳು

  • ಭಾರತದಾದ್ಯಂತ 90.9 ಲಕ್ಷ ಸ್ವಸಹಾಯ ಗುಂಪುಗಳಾಗಿ 10.05 ಕೋಟಿ ಗ್ರಾಮೀಣ ಕುಟುಂಬಗಳನ್ನು ಒಗ್ಗೂಡಿಸಿದೆ.
  • ಉದ್ಯಮಶೀಲತಾ ಕಾರ್ಯಕ್ರಮಗಳ ಮೂಲಕ 4.6 ಕೋಟಿ ಮಹಿಳಾ ಕಿಸಾನ್‌ಗಳು (ಮಹಿಳಾ ರೈತರು) ಮತ್ತು 3.74 ಲಕ್ಷ ಉದ್ಯಮಗಳಿಗೆ ಬೆಂಬಲ ನೀಡಿದೆ.
  • ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಅಡಿಯಲ್ಲಿ 17.5 ಲಕ್ಷ ಗ್ರಾಮೀಣ ಯುವಕರಿಗೆ ತರಬೇತಿ ನೀಡಲಾಗಿದ್ದು, ಅವರಲ್ಲಿ 11.48 ಲಕ್ಷ ಜನರು ಈಗಾಗಲೇ ಉದ್ಯೋಗ ಪಡೆದಿದ್ದಾರೆ.
  • ಗ್ರಾಮೀಣ ಆರ್ಥಿಕ ಸೇರ್ಪಡೆ ಮತ್ತು ಸಾಲ ಲಭ್ಯತೆಯನ್ನು ಹೆಚ್ಚಿಸಲು 47,952 ಬ್ಯಾಂಕ್ ಸಖಿಯರನ್ನು ನಿಯೋಜಿಸಲಾಗಿದೆ.
  • ಕೃಷಿ, ಅರಣ್ಯೇತರ ಉತ್ಪನ್ನಗಳು, ಪಶುಸಂಗೋಪನೆ ಮತ್ತು ಕೃಷಿಯೇತರ ಉದ್ಯಮಗಳ ಮೂಲಕ ಸುಸ್ಥಿರ ಜೀವನೋಪಾಯವನ್ನು ಉತ್ತೇಜಿಸಿದೆ.

ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಭಾರತ ಸರ್ಕಾರವು, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮೂಲಕ ಜಾರಿಗೊಳಿಸುತ್ತಿರುವ ಒಂದು ಪ್ರಮುಖ ಬಡತನ ನಿರ್ಮೂಲನ ಕಾರ್ಯಕ್ರಮವಾಗಿದೆ. ಇದು ಬಡ ಕುಟುಂಬಗಳು ಲಾಭದಾಯಕ ಸ್ವಯಂ ಉದ್ಯೋಗ ಮತ್ತು ಕೌಶಲ್ಯಯುತ ವೇತನ ಉದ್ಯೋಗಾವಕಾಶಗಳನ್ನು ಪಡೆಯಲು ಅನುವು ಮಾಡಿಕೊಡುವ ಮೂಲಕ ಬಡತನವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಇದು ಬಡವರಿಗೆ ಸುಸ್ಥಿರ ಮತ್ತು ವೈವಿಧ್ಯಮಯ ಜೀವನೋಪಾಯದ ಆಯ್ಕೆಗಳಿಗೆ ಕಾರಣವಾಗುತ್ತದೆ. ಡಿಎವೈ – ಎನ್‌ಆರ್‌ಎಲ್‌ಎಂ ನ ಉದ್ದೇಶವು ಗ್ರಾಮೀಣ ಬಡ ಕುಟುಂಬಗಳನ್ನು ಸ್ವಸಹಾಯ ಗುಂಪುಗಳಾಗಿ  ಸಂಘಟಿಸುವುದು. ಹಾಗೂ, ಅವರು ತೀವ್ರ ಬಡತನದಿಂದ ಹೊರಬರಲು, ಕಾಲಾನಂತರದಲ್ಲಿ ಆದಾಯದಲ್ಲಿ ಗಮನಾರ್ಹ ಹೆಚ್ಚಳವನ್ನು ಸಾಧಿಸುವವರೆಗೆ, ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ನಿರಂತರವಾಗಿ ಪೋಷಿಸುವುದು ಮತ್ತು ಬೆಂಬಲಿಸುವುದು ಆಗಿದೆ.

ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ನ ಯಶಸ್ಸು ಗ್ರಾಮೀಣ ಜೀವನವನ್ನು ಪರಿವರ್ತಿಸಿರುವ ರೀತಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಂತಹ ಕಥೆಗಳಲ್ಲಿ ಮೇಘಾಲಯದ ಹೈಯಿನಿದಮಾಂಕಿ ಕನೈ ಅವರ ಕಥೆ ಒಂದು. ಜನವರಿ 2020 ರಲ್ಲಿ ಅವರು ಕೈರ್ಷನ್ಲಾಂಗ್ ಸ್ವಸಹಾಯ ಗುಂಪಿಗೆ ಸೇರಿದಾಗ ಅವರ ಯಶಸ್ವಿ ಉದ್ಯಮಿಯಾಗುವ ಪ್ರಯಾಣ ಪ್ರಾರಂಭವಾಯಿತು. ಅವರ ಎಸ್‌ಎಚ್‌ಜಿಯ ಬೆಂಬಲ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಮಾರ್ಗದರ್ಶನದೊಂದಿಗೆ, ಹೈಯಿನಿದಮಾಂಕಿ ಅವರು ಕೈಯಿಂದ ತಯಾರಿಸಿದ ಗುಲಾಬಿ, ಅಲೋವೆರಾ, ಕಿತ್ತಳೆ ಮತ್ತು ಲೆಮನ್ ಗ್ರಾಸ್ ಸಾಬೂನುಗಳನ್ನು (ಸೋಪ್‌ಗಳನ್ನು) ತಯಾರಿಸಲು ಪ್ರಾರಂಭಿಸಿದರು. ಏಪ್ರಿಲ್ನಲ್ಲಿ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದ ಕೆಲವೇ ತಿಂಗಳುಗಳಲ್ಲಿ, ಅಂದರೆ ಆಗಸ್ಟ್ 2023 ರಲ್ಲಿ, ಅವರ ಕಠಿಣ ಪರಿಶ್ರಮ ಫಲ ನೀಡಲು ಪ್ರಾರಂಭಿಸಿತು. ಅವರ ಸಾಮರ್ಥ್ಯವನ್ನು ಗುರುತಿಸಿ, ಅವರು ತಮ್ಮ ಎಸ್ಎಚ್ಜಿ ಮೂಲಕ ₹1.8 ಲಕ್ಷದ ಬ್ಯಾಂಕ್ ಸಾಲವನ್ನು ಪಡೆದರು. ಇದರೊಂದಿಗೆ, ಅವರು ಹೊಸ ಯಂತ್ರೋಪಕರಣಗಳು, ಉಪಕರಣಗಳನ್ನು ಖರೀದಿಸಿದರು ಮತ್ತು ತಮ್ಮ ಸಾಬೂನುಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಪ್ರಯೋಗಾಲಯ ಪರೀಕ್ಷೆಯನ್ನು ಸಹ ನಡೆಸಿದರು.

ನಿಧಾನವಾಗಿ ಆದರೆ ಸ್ಥಿರವಾಗಿ, ಹೈಯಿನಿದಮಾಂಕಿಯ ಉದ್ಯಮವು ಅಭಿವೃದ್ಧಿ ಹೊಂದಿತು. ಅವರ ವಾರ್ಷಿಕ ಆದಾಯವು ₹1 ಲಕ್ಷವನ್ನು ದಾಟಿತು, ಇದು ಅವರ ಜೀವನವನ್ನು ಪರಿವರ್ತಿಸಿತು ಮತ್ತು ಇನ್ನಷ್ಟು ದೊಡ್ಡ ಕನಸು ಕಾಣುವ ಆತ್ಮವಿಶ್ವಾಸವನ್ನು ನೀಡಿತು. ಅವರು ತಮ್ಮ ವೈಯಕ್ತಿಕ ಯಶಸ್ಸಿಗೆ ಮಾತ್ರ ಸೀಮಿತವಾಗದೆ, ತಮ್ಮ ಗ್ರಾಮದ ಇತರ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಾಬೂನು ತಯಾರಿಕೆಯ ತರಬೇತಿಯನ್ನು ನೀಡಲು ಪ್ರಾರಂಭಿಸಿದರು, ಹೀಗೆ ಜ್ಞಾನವನ್ನು ಹಂಚಿ ಇತರರಿಗೂ ಅವರ ಉದ್ಯಮಶೀಲತೆಯ ಕನಸುಗಳನ್ನು ಅನುಸರಿಸಲು ಪ್ರೇರೇಪಿಸಿದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್  ಅನ್ನು ಈ ಹಿಂದಿನ ಸ್ವರ್ಣಜಯಂತಿ ಗ್ರಾಮ ಸ್ವರೋಜ್ಗಾರ್ ಯೋಜನೆಯನ್ನು ಪುನರ್‌ ರಚಿಸಿ 2010ರಲ್ಲಿ ಮಿಷನ್-ಮೋಡ್ ಯೋಜನೆಯಾಗಿ ಪ್ರಾರಂಭಿಸಲಾಯಿತು. 2016 ರಲ್ಲಿ, ಈ ಕಾರ್ಯಕ್ರಮವನ್ನು ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಎಂದು ಮರುನಾಮಕರಣ ಮಾಡಲಾಯಿತು.

ಕೇಂದ್ರ ಪ್ರಾಯೋಜಿತ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಹಣವನ್ನು ಒದಗಿಸುತ್ತವೆ. ಬಡವರ ಜೀವನೋಪಾಯವನ್ನು ಸುಧಾರಿಸುವ ವಿಶ್ವದ ಅತಿದೊಡ್ಡ ಉಪಕ್ರಮಗಳಲ್ಲಿ ಇದು ಒಂದಾಗಿದೆ. ಈ ಮಿಷನ್ ತನ್ನ ಉದ್ದೇಶವನ್ನು ನಾಲ್ಕು ಪ್ರಮುಖ ಅಂಶಗಳಲ್ಲಿ ಹೂಡಿಕೆ ಮಾಡುವ ಮೂಲಕ ಸಾಧಿಸಲು ಪ್ರಯತ್ನಿಸುತ್ತದೆ:

  ಗ್ರಾಮೀಣ ಬಡ ಮಹಿಳೆಯರ ಸ್ವಯಂ-ನಿರ್ವಹಣೆಯ ಮತ್ತು ಆರ್ಥಿಕವಾಗಿ ಸುಸ್ಥಿರವಾದ ಸಮುದಾಯ ಸಂಸ್ಥೆಗಳ ಸಾಮಾಜಿಕ ಸಜ್ಜುಗೊಳಿಸುವಿಕೆ, ಉತ್ತೇಜನ ಮತ್ತು ಬಲವರ್ಧನೆ;

  ಹಣಕಾಸು ಸೇರ್ಪಡೆ;

  ಸುಸ್ಥಿರ ಜೀವನೋಪಾಯಗಳು; ಮತ್ತು

  ಸಂಯೋಜನೆಯ ಮೂಲಕ ಸಾಮಾಜಿಕ ಸೇರ್ಪಡೆ, ಸಾಮಾಜಿಕ ಅಭಿವೃದ್ಧಿ ಮತ್ತು ಹಕ್ಕುಗಳ ಪ್ರವೇಶ.

ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಉದ್ದೇಶಗಳು

ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಬಡವರಿಗಾಗಿ, ವಿಶೇಷವಾಗಿ ಮಹಿಳೆಯರಿಗಾಗಿ, ಸ್ವಸಹಾಯ ಗುಂಪುಗಳಂತಹ ಬಲವಾದ ಸಂಸ್ಥೆಗಳನ್ನು ನಿರ್ಮಿಸಲು ಮತ್ತು ಈ ಸಂಸ್ಥೆಗಳಿಗೆ ವಿವಿಧ ಹಣಕಾಸು ಸೇವೆಗಳು ಮತ್ತು ಜೀವನೋಪಾಯಗಳನ್ನು ಪಡೆಯಲು ಅನುವು ಮಾಡಿಕೊಡಲು ಪ್ರೋತ್ಸಾಹಿಸುತ್ತದೆ.

ಈ ಸಂಸ್ಥೆಗಳು ಅವರಿಗೆ ತಮ್ಮ ಜೀವನೋಪಾಯವನ್ನು ವೈವಿಧ್ಯಗೊಳಿಸಲು, ಆದಾಯವನ್ನು ಹೆಚ್ಚಿಸಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ದೀರ್ಘಾವಧಿಯ ಬೆಂಬಲವನ್ನು ನೀಡುತ್ತವೆ.

ಮಿಷನ್‌ನ ಹೆಚ್ಚಿನ ಮಧ್ಯಸ್ಥಿಕೆಗಳನ್ನು  ಸ್ವಸಹಾಯ ಗುಂಪಿನ ಮಹಿಳೆಯರೇ ಅನುಷ್ಠಾನಗೊಳಿಸುತ್ತಿದ್ದಾರೆ ಮತ್ತು ವಿಸ್ತರಿಸುತ್ತಿದ್ದಾರೆ. ಇವರನ್ನು ಸಮುದಾಯ ಸಂಪನ್ಮೂಲ ವ್ಯಕ್ತಿಗಳುಕೃಷಿ ಸಖಿಯರು, ಪಶು ಸಖಿಯರು, ಬ್ಯಾಂಕ್ ಸಖಿಯರು, ಬಿಮಾ ಸಖಿಯರು, ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಸಖಿಯರು ಇತ್ಯಾದಿಯಾಗಿ ತರಬೇತಿ ನೀಡಲಾಗಿದೆ. ದೇಶೀಯ ಹಿಂಸೆ, ಮಹಿಳಾ ಶಿಕ್ಷಣ ಮತ್ತು ಇತರ ಲಿಂಗ-ಸಂಬಂಧಿತ ಕಾಳಜಿಗಳು, ಪೋಷಣೆ, ನೈರ್ಮಲ್ಯ, ಆರೋಗ್ಯ ಇತ್ಯಾದಿ ವಿಷಯಗಳ ಬಗ್ಗೆ ಅರಿವು ಮೂಡಿಸುವಿಕೆ ಮತ್ತು ವರ್ತನೆಯ ಬದಲಾವಣೆಯ ಸಂವಹನ ಮೂಲಕ ಎಸ್‌ಎಚ್‌ಜಿ ಮಹಿಳೆಯರಿಗೆ ಅಧಿಕಾರ ನೀಡುವ ಕೆಲಸವನ್ನು ಸಹ ಮಿಷನ್ ಮಾಡುತ್ತಿದೆ. ಈ ಯೋಜನೆಯ ಅಡಿಯಲ್ಲಿ ರಚಿಸಲಾದ ಸ್ವಸಹಾಯ ಗುಂಪುಗಳ ಉದ್ದೇಶವು ಈ ಕೆಳಗಿನವುಗಳನ್ನು ಸುಗಮಗೊಳಿಸುವುದು:

  ಔಪಚಾರಿಕ ಸಾಲಕ್ಕೆ ಪ್ರವೇಶ;

  ಜೀವನೋಪಾಯದ ವೈವಿಧ್ಯೀಕರಣ ಮತ್ತು ಬಲವರ್ಧನೆಗೆ ಬೆಂಬಲ; ಮತ್ತು

  ಹಕ್ಕುಗಳು ಹಾಗೂ ಸಾರ್ವಜನಿಕ ಸೇವೆಗಳ ಪ್ರವೇಶ.

ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಮೂಲಕ ಮಹಿಳಾ ಸಬಲೀಕರಣ

ಈ ಮಿಷನ್‌ನ ಪ್ರಮುಖ ಉದ್ದೇಶವು, ಬಡ ಕುಟುಂಬಗಳಿಗೆ, ವಿಶೇಷವಾಗಿ ಮಹಿಳೆಯರಿಗೆ, ಹಣಕಾಸು ಸೇವೆಗಳನ್ನು ಪಡೆಯಲು, ತಮ್ಮ ಜೀವನೋಪಾಯವನ್ನು ವೈವಿಧ್ಯಗೊಳಿಸಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಅನುವು ಮಾಡಿಕೊಡುವ ಮೂಲಕ ಬಡತನವನ್ನು ಕಡಿಮೆ ಮಾಡುವುದಾಗಿದೆ. ಆರ್ಥಿಕವಾಗಿ, ಈ ಮಿಷನ್ ಪ್ರಮುಖ ಹಣಕಾಸು, ತಾಂತ್ರಿಕ ಮತ್ತು ಮಾರುಕಟ್ಟೆ ಸಂಪನ್ಮೂಲಗಳನ್ನು ಒದಗಿಸುವ ಸಮುದಾಯ ಸಂಸ್ಥೆಗಳನ್ನು ಪೋಷಿಸುವುದರ ಮೂಲಕ ಮಹಿಳೆಯರಿಗೆ ಅಧಿಕಾರ ನೀಡುತ್ತದೆ. ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಲಾಗಿದೆ: ₹11 ಲಕ್ಷ ಕೋಟಿಗೂ ಹೆಚ್ಚು ಸಾಲವನ್ನು ಔಪಚಾರಿಕ ಹಣಕಾಸು ಸಂಸ್ಥೆಗಳ ಮೂಲಕ ಮಹಿಳಾ ಸ್ವಸಹಾಯ ಗುಂಪುಗಳಿಗೆ ವಿತರಿಸಲಾಗಿದೆ. ಬ್ಯಾಂಕ್ ಸಖಿಯರು ಮತ್ತು ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಸಖಿಯರು ಎಂದು ತರಬೇತಿ ಪಡೆದ ಮಹಿಳೆಯರು ಈ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತಾರೆ. ಇವರು ಎಸ್‌ಎಚ್‌ಜಿಗಳು ಮತ್ತು ಔಪಚಾರಿಕ ಬ್ಯಾಂಕಿಂಗ್ ಸಂಸ್ಥೆಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಈ ₹11 ಲಕ್ಷ ಕೋಟಿ ವಿತರಣೆಯು ಒತ್ತೆ-ರಹಿತ ಸಾಲಗಳು, ಬಡ್ಡಿ ಸಬ್ಸಿಡಿಗಳು ಮತ್ತು ಇತರ ಆರ್ಥಿಕ ನೆರವಿನಿಂದ ಬೆಂಬಲಿತವಾಗಿದೆ. ವಿಶೇಷವೆಂದರೆ, ಇದರ ಮರುಪಾವತಿ ದರವು 98 ಪ್ರತಿಶತಕ್ಕಿಂತಲೂ ಹೆಚ್ಚಿದೆ, ಇದು ಈ ಕಾರ್ಯಕ್ರಮಗಳ ಪರಿಣಾಮಕಾರಿತ್ವ ಮತ್ತು ಸುಸ್ಥಿರತೆಯನ್ನು ಉಲ್ಲೇಖಿಸುತ್ತದೆ.

ಜೀವನೋಪಾಯದ ವಿಷಯದಲ್ಲಿ, ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳು ಎರಡಕ್ಕೂ ಬೆಂಬಲ ನೀಡುತ್ತದೆ. ಇದು ಕೃಷಿ-ಪರಿಸರ ಪದ್ಧತಿಗಳನ್ನು ಉತ್ತೇಜಿಸುವ ಮೂಲಕ 'ಮಹಿಳಾ ಕಿಸಾನ್ಗಳು' (ಮಹಿಳಾ ರೈತರು) ಎಂದು ಕರೆಯಲ್ಪಡುವ ಮಹಿಳಾ ರೈತರಿಗೆ ಅಧಿಕಾರ ನೀಡುತ್ತದೆ ಮತ್ತು ಈ ಮಧ್ಯಸ್ಥಿಕೆಗಳ ಅಡಿಯಲ್ಲಿ 4.62 ಕೋಟಿ ಮಹಿಳೆಯರನ್ನು ಒಳಗೊಂಡಿದೆ. ಈ ಮಹಿಳಾ ಕಿಸಾನ್‌ಗಳಿಗೆ ಕೈಜೋಡಿಸಲು ಮತ್ತು ವರ್ಷವಿಡೀ ವಿಸ್ತರಣಾ ಸೇವೆಗಳನ್ನು ಒದಗಿಸಲು, ಕೃಷಿಸಖಿ ಮತ್ತು ಪಶುಸಖಿ ಎಂದು ಕರೆಯಲ್ಪಡುವ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಬಲವಾದ ಜಾಲವನ್ನು ನಿಯೋಜಿಸಲಾಗಿದೆ.

ಈ ಮಿಷನ್, ಸ್ಟಾರ್ಟ್-ಅಪ್ ವಿಲೇಜ್ ಎಂಟರ್ಪ್ರೆನ್ಯೂರ್ಶಿಪ್ ಪ್ರೋಗ್ರಾಂನಂತಹ ಉಪ-ಯೋಜನೆಗಳ ಮೂಲಕ ಕೈಮಗ್ಗ ಮತ್ತು ಆಹಾರ ಸಂಸ್ಕರಣೆಯಂತಹ ಕ್ಷೇತ್ರಗಳಲ್ಲಿ ಸಣ್ಣ ಉದ್ಯಮಗಳನ್ನು ಉತ್ತೇಜಿಸುತ್ತದೆ. ಇದು ಈಗಾಗಲೇ 3.74 ಲಕ್ಷಕ್ಕೂ ಹೆಚ್ಚು ಉದ್ಯಮಗಳಿಗೆ ಬೆಂಬಲ ನೀಡಿದೆ. ದೇಶೀಯ ಹಿಂಸೆ, ಮಹಿಳಾ ಶಿಕ್ಷಣ ಮತ್ತು ಇತರ ಲಿಂಗ-ಸಂಬಂಧಿತ ಕಾಳಜಿಗಳು, ಪೋಷಣೆ, ನೈರ್ಮಲ್ಯ, ಆರೋಗ್ಯ ಇತ್ಯಾದಿ ವಿಷಯಗಳ ಕುರಿತು ಅರಿವು ಮೂಡಿಸುವಿಕೆ ಮತ್ತು ವರ್ತನೆಯ ಬದಲಾವಣೆಯ ಸಂವಹನದ ಮೂಲಕ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಅಧಿಕಾರ ನೀಡುವ ಕೆಲಸವನ್ನು ಸಹ ಮಿಷನ್ ಮಾಡುತ್ತಿದೆ.

ಕೃಷಿ ಸಖಿ ಒಬ್ಬ ಸಮುದಾಯ ಕೃಷಿ ಸೇವಾ ಪ್ರಧಾತೆಯಾಗಿದ್ದು, ಇವರು ಕೃಷಿ ಆಧಾರಿತ ಸೇವೆಗಳು ವಿರಳವಾಗಿರುವ ಅಥವಾ ದುಬಾರಿಯಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಅಂತ್ಯದ ಹಂತದ ಖಚಿತಪಡಿಸುತ್ತಾರೆ. ಇವರು ಸುಸ್ಥಿರ ಕೃಷಿಯಲ್ಲಿ ಅರಿವು ಮೂಡಿಸಿ ಸಮುದಾಯದ ಸಾಮರ್ಥ್ಯವನ್ನು ನಿರ್ಮಿಸುತ್ತಾರೆ. ಇದರ ಜೊತೆಗೆ, ರೈತರ ಆದಾಯವನ್ನು ಸುಧಾರಿಸಲು ಕೃಷಿ ಉತ್ಪನ್ನಗಳ ಸಂಗ್ರಹಣೆ ಮತ್ತು ಮಾರಾಟವನ್ನು ಸುಗಮಗೊಳಿಸುತ್ತಾರೆ.

ಬ್ಯಾಂಕ್ ಸಖಿ ಯವರು ಸ್ವಸಹಾಯ ಗುಂಪಿನ ತರಬೇತಿ ಪಡೆದ ಸದಸ್ಯರಾಗಿದ್ದು, ಹಣಕಾಸು ಸೇವೆಗಳಲ್ಲಿ ಎಸ್‌ಎಚ್‌ಜಿಗಳಿಗೆ ಬೆಂಬಲ ನೀಡಲು ಬ್ಯಾಂಕ್ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಅವರು ಎಸ್‌ಎಚ್‌ಜಿಉಳಿತಾಯ ಖಾತೆಗಳನ್ನು ತೆರೆಯಲು ಸಹಾಯ ಮಾಡುತ್ತಾರೆ, ಸಾಲ ಮತ್ತು ಡೆಬಿಟ್ ವ್ಯವಹಾರಗಳನ್ನು ಸುಗಮಗೊಳಿಸುತ್ತಾರೆ ಮತ್ತು ಸಾಲ ಸಂಪರ್ಕವನ್ನು ಸಕ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇದರಿಂದ ಎಸ್‌ಎಚ್‌ಜಿಗಳು ಸಾಲಗಳು ಮತ್ತು ಇತರ ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಪಶು ಸಖಿ ಒಬ್ಬ ಸಮುದಾಯ ಪ್ರಾಣಿ-ಆರೈಕೆ ಸೇವಾ ಪ್ರಧಾತೆ ಆಗಿದ್ದು, ಇವರು ಪಶುವೈದ್ಯಕೀಯ ಆರೈಕೆ ವಿರಳವಾಗಿರುವ ಅಥವಾ ದುಬಾರಿಯಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಅಂತ್ಯದ ಹಂತದ ಪಶುಸಂಗೋಪನಾ ಸೇವೆಗಳನ್ನು ಖಚಿತಪಡಿಸುತ್ತಾರೆ. ಪಶು ಸಖಿಯವರು ಅರಿವು ಮೂಡಿಸಿ, ಪಶುಸಂಗೋಪನೆ ಆಧಾರಿತ ಜೀವನೋಪಾಯಗಳಲ್ಲಿ ಸಮುದಾಯದ ಸಾಮರ್ಥ್ಯವನ್ನು ನಿರ್ಮಿಸುತ್ತಾರೆ. ಇದರ ಜೊತೆಗೆ, ಗ್ರಾಮೀಣ ಆದಾಯವನ್ನು ಸುಧಾರಿಸಲು ಪಶು ಉತ್ಪನ್ನಗಳ ಸಂಗ್ರಹಣೆ ಮತ್ತು ಮಾರಾಟಕ್ಕೆ ಸಹಾಯ ಮಾಡುತ್ತಾರೆ.

ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್  28 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಲ್ಲಿ 10.05 ಕೋಟಿ ಗ್ರಾಮೀಣ ಮಹಿಳಾ ಕುಟುಂಬಗಳನ್ನು 90.90 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಾಗಿ ಸಂಘಟಿಸಿದೆ.

  4.62 ಕೋಟಿ ಎಸ್ಎಚ್ಜಿ ಸದಸ್ಯರು ಮಹಿಳಾ ಕಿಸಾನ್ಗಳಾಗಿ (ಮಹಿಳಾ ರೈತರಾಗಿ) ತೊಡಗಿಸಿಕೊಂಡಿದ್ದಾರೆ.

  3.5 ಲಕ್ಷ ಕೃಷಿ ಸಖಿಯರು ಮತ್ತು ಪಶು ಸಖಿಯರನ್ನು ನಿಯೋಜಿಸಲಾಗಿದೆ.

  6,000 ಸಮಗ್ರ ಕೃಷಿ ಸಮೂಹಗಳನ್ನು ರಚಿಸಲಾಗಿದೆ.

  1.95 ಲಕ್ಷ ಉತ್ಪಾದಕ ಗುಂಪುಗಳು ರಚನೆಯಾಗಿದ್ದು, 50 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ಪ್ರಯೋಜನವಾಗಿದೆ.

  282 ಬ್ಲಾಕ್ಗಳಲ್ಲಿ 3.74 ಲಕ್ಷ ಉದ್ಯಮಗಳಿಗೆ ಬೆಂಬಲ ನೀಡಲಾಗಿದೆ.

  2013-14 ರಿಂದ ಮಹಿಳಾ ಎಸ್‌ಎಚ್‌ಜಿಗಳು ₹11 ಲಕ್ಷ ಕೋಟಿ ಸಾಲವನ್ನು ಪಡೆದಿವೆ.

  ಎಸ್‌ಎಚ್‌ಜಿಗಳ ಸಾಲ ಸಂಪರ್ಕವನ್ನು ಸುಗಮಗೊಳಿಸಲು ಬ್ಯಾಂಕ್ ಶಾಖೆಗಳಲ್ಲಿ 47,952 ಬ್ಯಾಂಕ್ ಸಖಿಯರನ್ನು ನಿಯೋಜಿಸಲಾಗಿದೆ.

ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಹೆಚ್ಚು ಸಾಧನೆ ಮಾಡಿದ ರಾಜ್ಯಗಳು

ಜೂನ್ 30, 2025 ರ ಹೊತ್ತಿಗೆ, ಬಿಹಾರ, ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶಗಳು ಅತಿ ಹೆಚ್ಚು ಸ್ವಸಹಾಯ ಗುಂಪುಗಳನ್ನು ಹೊಂದಿರುವ ಮತ್ತು ಈ ಯೋಜನೆ ಪ್ರಾರಂಭವಾದಾಗಿನಿಂದ ಅತಿ ಹೆಚ್ಚಿನ ಸಂಖ್ಯೆಯ ಮಹಿಳಾ ಕುಟುಂಬಗಳನ್ನು SHGಗಳಿಗೆ ಸಂಘಟಿಸಿರುವ ರಾಜ್ಯಗಳಲ್ಲಿ ಸೇರಿವೆ.

ಆರ್ಥಿಕ ಬೆಂಬಲ ಮತ್ತು ಸೇರ್ಪಡೆಯ ವಿಷಯದಲ್ಲಿ, ಫೆಬ್ರವರಿ 28, 2025 ರ ಹೊತ್ತಿಗೆ 2024-25 ನೇ ಹಣಕಾಸು ವರ್ಷದಲ್ಲಿ ಹಲವಾರು ರಾಜ್ಯಗಳು ಅನುಕರಣೀಯ ಸಾಧನೆ ಮಾಡಿವೆ. ಸ್ವಸಹಾಯ ಗುಂಪುಗಳಿಗೆ ಬಂಡವಾಳ ಬೆಂಬಲವನ್ನು) ಒದಗಿಸುವಲ್ಲಿ, ಉತ್ತರ ಪ್ರದೇಶವು1,23,326 ಲಕ್ಷ ಮತ್ತು ಬಿಹಾರವು1,05,132 ಲಕ್ಷವನ್ನು ವಿತರಿಸಿದ್ದು, ಎರಡೂ ತಮ್ಮ ನಿಗದಿತ ಗುರಿಯನ್ನು ಮೀರಿದೆ. ಎಸ್‌ಎಚ್‌ಜಿಗಳಿಗೆ ಬ್ಯಾಂಕ್ ಸಾಲಗಳನ್ನು ಸುಗಮಗೊಳಿಸುವ ವಿಷಯಕ್ಕೆ ಬಂದಾಗ, ಆಂಧ್ರ ಪ್ರದೇಶವು34,83,725 ಲಕ್ಷದ ವಿತರಣೆಯೊಂದಿಗೆ ರಾಷ್ಟ್ರದಲ್ಲಿ ಮುಂಚೂಣಿಯಲ್ಲಿದೆ.

ಸುಸ್ಥಿರ ಜೀವನೋಪಾಯವನ್ನು ಉತ್ತೇಜಿಸುವ ವಿಷಯದಲ್ಲಿ, ವಿವಿಧ ರಾಜ್ಯಗಳು ಕೃಷಿ ಮತ್ತು ಕೃಷಿಯೇತರ ವಲಯಗಳಲ್ಲಿ ಉತ್ತಮ ಸಾಧನೆ ಮಾಡಿವೆ. ಕೃಷಿ ಆಧಾರಿತ ಉಪಕ್ರಮಗಳಲ್ಲಿ, ಮಹಾರಾಷ್ಟ್ರವು ಕೃಷಿ-ಪರಿಸರ ಪದ್ಧತಿಗಳ ಅಡಿಯಲ್ಲಿ ಅತಿ ಹೆಚ್ಚು 'ಮಹಿಳಾ ಕಿಸಾನ್ಗಳನ್ನು' (ಮಹಿಳಾ ರೈತರನ್ನು) ಒಳಗೊಂಡಿದ್ದು, 12,97,051 ಮಹಿಳೆಯರನ್ನು ಒಳಗೊಳ್ಳುವ ಮೂಲಕ ಪ್ರಮುಖ ಸ್ಥಾನದಲ್ಲಿದೆ. ಇದರ ನಂತರ ಉತ್ತರ ಪ್ರದೇಶ (11,37,950) ಮತ್ತು ಆಂಧ್ರ ಪ್ರದೇಶ (10,43,085) ಇವೆ. ಸ್ಟಾರ್ಟ್-ಅಪ್ ವಿಲೇಜ್ ಎಂಟರ್ಪ್ರೆನ್ಯೂರ್ಶಿಪ್ ಪ್ರೋಗ್ರಾಂ ಅಡಿಯಲ್ಲಿ ಕೃಷಿಯೇತರ ಸಣ್ಣ ಉದ್ಯಮಗಳನ್ನು ಉತ್ತೇಜಿಸುವಲ್ಲಿ, ಅಸ್ಸಾಂ 9,557 ಉದ್ಯಮಗಳಿಗೆ ಬೆಂಬಲ ನೀಡುವ ಮೂಲಕ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಕೇರಳ (5,802) ಮತ್ತು ಪಶ್ಚಿಮ ಬಂಗಾಳ (4,933) ಸಹ ಉತ್ತಮ ಸಾಧನೆಯನ್ನು ತೋರಿಸಿವೆ.

ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಕಾರ್ಯಕ್ರಮಗಳು

ಗ್ರಾಮೀಣಾಭಿವೃದ್ಧಿ ಸಚಿವಾಲಯವು ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಎರಡು ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಗಳು ಈ ಕೆಳಗಿನ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಬಡ ಯುವಜನರಿಗೆ ಲಾಭದಾಯಕ ಉದ್ಯೋಗಕ್ಕಾಗಿ ಕೌಶಲ್ಯಗಳನ್ನು ಒದಗಿಸುವ ಮತ್ತು ಬಡತನ ನಿರ್ಮೂಲನೆಗೆ ಕೊಡುಗೆ ನೀಡುವ ಗುರಿ ಹೊಂದಿವೆ:

ಇದು 15 ರಿಂದ 35 ವರ್ಷದೊಳಗಿನ ಗ್ರಾಮೀಣ ಯುವಕರಿಗೆ ಉದ್ಯೋಗದೊಂದಿಗೆ ಸಂಪರ್ಕಿತವಾದ ಕೌಶಲ್ಯ ತರಬೇತಿಯನ್ನು ಒದಗಿಸುತ್ತದೆ. ಈ ಕಾರ್ಯಕ್ರಮವು ಉದ್ಯೋಗವನ್ನು ಖಚಿತಪಡಿಸುವಂತೆ ಪ್ರಾಯೋಗಿಕ ಕೌಶಲ್ಯ ಅಭಿವೃದ್ಧಿಯನ್ನು ಖಾತರಿಪಡಿಸುತ್ತದೆ. ಇದರಿಂದ ಭಾಗವಹಿಸುವವರು ಔಪಚಾರಿಕ ಉದ್ಯೋಗ ಮಾರುಕಟ್ಟೆಯಲ್ಲಿ ಕನಿಷ್ಠ ವೇತನದಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ವೇತನವನ್ನು ಗಳಿಸಲು ಸಾಧ್ಯವಾಗುತ್ತದೆ. ಜೂನ್ 2025 ರ ಹೊತ್ತಿಗೆ, ಒಟ್ಟು 17.50 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ ಮತ್ತು ಒಟ್ಟು 11.48 ಲಕ್ಷ ಮಂದಿಗೆ ಉದ್ಯೋಗ ನೀಡಲಾಗಿದೆ.

ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳು: ಇವು 18 ರಿಂದ 50 ವರ್ಷದೊಳಗಿನ ಯುವಕರಿಗಾಗಿರುವ ಬ್ಯಾಂಕ್ ಪ್ರಾಯೋಜಿತ ಕೇಂದ್ರಗಳಾಗಿವೆ. ಈ ಕೇಂದ್ರಗಳು ಉದ್ಯಮಶೀಲತಾ ತರಬೇತಿಯನ್ನು ಒದಗಿಸುತ್ತವೆ ಮತ್ತು ಸ್ವಯಂ ಉದ್ಯೋಗ ಹಾಗೂ ವೇತನ ಉದ್ಯೋಗವನ್ನು ಉತ್ತೇಜಿಸುತ್ತವೆ. ಮೂಲಸೌಕರ್ಯ ಮತ್ತು ತರಬೇತಿ ವೆಚ್ಚಕ್ಕಾಗಿ ಹಣಕಾಸಿನ ನೆರವು ನೀಡಲಾಗುತ್ತದೆ. ಈ ಕೇಂದ್ರಗಳು ಪ್ರಾರಂಭವಾದಾಗಿನಿಂದ ಜೂನ್ 2025 ರವರೆಗೆ ಒಟ್ಟು 56.69 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಒಟ್ಟು 40.99 ಲಕ್ಷ ಮಂದಿ ನೆಲೆಸಿದ್ದಾರೆ (ಉದ್ಯೋಗ ಅಥವಾ ಸ್ವಯಂ ಉದ್ಯೋಗವನ್ನು ಕಂಡುಕೊಂಡಿದ್ದಾರೆ).

ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಅಡಿಯಲ್ಲಿ ಹೆಚ್ಚು ಸಾಧನೆ ಮಾಡಿದ ರಾಜ್ಯಗಳು (2014-15 ರಿಂದ ಜೂನ್ 2025 ರವರೆಗೆ)

ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಅಡಿಯಲ್ಲಿ, ಅತಿ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶವು 2,44,528 ಅಭ್ಯರ್ಥಿಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇದರ ನಂತರ ಒಡಿಶಾ (2,15,409) ಮತ್ತು ಆಂಧ್ರ ಪ್ರದೇಶ (1,33,842) ಸ್ಥಾನ ಪಡೆದಿವೆ. ಉದ್ಯೋಗ ನೀಡಿಕೆಯ ವಿಷಯಕ್ಕೆ ಬಂದಾಗ, ಒಡಿಶಾ 1,77,165 ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸಿ ಮುಂಚೂಣಿಯಲ್ಲಿದೆ. ಆಂಧ್ರ ಪ್ರದೇಶವು ಸಹ 1,17,881 ಉದ್ಯೋಗಗಳನ್ನು ಒದಗಿಸಿ ಉತ್ತಮ ಸಾಧನೆ ತೋರಿಸಿದೆ.

ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳ ಅಡಿಯಲ್ಲಿ ಅಗ್ರ ರಾಜ್ಯಗಳು (2014-15 ರಿಂದ ಜೂನ್ 2025 ರವರೆಗೆ)

ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳ ಕಾರ್ಯಕ್ರಮದ ಅಡಿಯಲ್ಲಿ, ಉತ್ತರ ಪ್ರದೇಶವು ಅತ್ಯುತ್ತಮ ಸಾಧನೆ ಮಾಡಿದ ರಾಜ್ಯವಾಗಿ ಎದ್ದು ಕಾಣುತ್ತದೆ. ಇದು ಅತಿ ಹೆಚ್ಚು ಅಭ್ಯರ್ಥಿಗಳಿಗೆ (7,55,966) ತರಬೇತಿ ನೀಡಿದೆ ಮತ್ತು ಅತಿ ಹೆಚ್ಚು ಉದ್ಯಮಿಗಳನ್ನು (5,54,877) ಯಶಸ್ವಿಯಾಗಿ ನೆಲೆಸುವಂತೆ ಮಾಡಿದೆ. ತರಬೇತಿ ಮತ್ತು ನೆಲೆಸುವಿಕೆ ಎರಡರಲ್ಲೂ ಗಮನಾರ್ಹ ಸಾಧನೆಗಳನ್ನು ಹೊಂದಿರುವ ಇತರ ರಾಜ್ಯಗಳಲ್ಲಿ ರಾಜಸ್ಥಾನ (4,34,478 ತರಬೇತಿ; 3,19,948 ನೆಲೆಸುವಿಕೆ), ಮಧ್ಯಪ್ರದೇಶ (4,36,835 ತರಬೇತಿ; 3,08,280 ನೆಲೆಸುವಿಕೆ), ಮತ್ತು ಕರ್ನಾಟಕ (4,19,299 ತರಬೇತಿ; 3,05,397 ನೆಲೆಸುವಿಕೆ) ಸೇರಿವೆ.

ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಸುಧಾರಿತ ಮತ್ತು ಮಾರುಕಟ್ಟೆ ತರಬೇತಿ

ಸ್ವಸಹಾಯ ಗುಂಪಿನ (SHG) ಸದಸ್ಯರಿಗೆ, ವಿಶೇಷವಾಗಿ ಮಹಿಳೆಯರಿಗೆ, ಸುಧಾರಿತ ತರಬೇತಿ ಮತ್ತು ಮಾರುಕಟ್ಟೆ ಕೌಶಲ್ಯಗಳನ್ನು ನೀಡಲು ಸರ್ಕಾರ ಕೈಗೊಂಡ ಕ್ರಮಗಳು:

ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ 'ಸರಸ್ ಆಜೀವಿಕಾ ಮೇಳಗಳನ್ನು' ಪ್ರತಿ ವರ್ಷ ಆಯೋಜಿಸಲಾಗುತ್ತಿದ್ದು, ಇವು ಮಾರುಕಟ್ಟೆ ಮತ್ತು ಸಂಬಂಧಿತ ಸಾಮರ್ಥ್ಯಗಳಿಗಾಗಿ ವಿಶೇಷ ತರಬೇತಿಯನ್ನು ಒದಗಿಸುತ್ತವೆ. ಅತ್ಯಂತ ಇತ್ತೀಚಿನ ಮೇಳವು ಸೆಪ್ಟೆಂಬರ್ 5 ರಿಂದ 22, 2025 ರವರೆಗೆ ನವದೆಹಲಿಯಲ್ಲಿ ನಡೆಯಿತು.

(ಸರಸ್ ಆಜೀವಿಕಾ ಮೇಳ 2025 ರ ಕುರಿತು ಇನ್ನಷ್ಟು ತಿಳಿಯಲು, ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: @ https://www.pib.gov.in/FeaturesDeatils.aspx?NoteId=155247&ModuleId=2)

ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯು, ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಬೆಂಬಲಿತರಾದ ಸ್ವಸಹಾಯ ಗುಂಪಿನ ಸದಸ್ಯರು ಮತ್ತು ಗ್ರಾಮೀಣ ಉದ್ಯಮಿಗಳ ಸಾಮರ್ಥ್ಯವನ್ನು ನಿರ್ಮಿಸಲು ಮಾರುಕಟ್ಟೆ ಕೌಶಲ್ಯಗಳ ಕುರಿತು ತರಬೇತುದಾರರಿಗೆ ತರಬೇತಿಯನ್ನು ನಡೆಸುತ್ತದೆ. ಕಳೆದ ಮೂರು ವರ್ಷಗಳಲ್ಲಿ, NIRD&PR ಒಟ್ಟು 44 ತರಬೇತಿ ಮತ್ತು ಸಾಮರ್ಥ್ಯ-ನಿರ್ಮಾಣ ಕಾರ್ಯಕ್ರಮಗಳನ್ನು ನಡೆಸಿದೆ.

ಉಪಸಂಹಾರ

ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಭಾರತದಲ್ಲಿ ಗ್ರಾಮೀಣ ಬಡತನ ನಿವಾರಣೆ ಮತ್ತು ಮಹಿಳಾ ಸಬಲೀಕರಣದ ಕೇಂದ್ರಬಿಂದುವಾಗಿದೆ. ಇದು ಔಪಚಾರಿಕ ಸಾಲ, ಕೌಶಲ್ಯಗಳು ಮತ್ತು ಮಾರುಕಟ್ಟೆ ಅವಕಾಶಗಳಿಗೆ ಪ್ರವೇಶವನ್ನು ವಿಸ್ತರಿಸಿದೆ, ಇದರಿಂದಾಗಿ ಸುಸ್ಥಿರ ಜೀವನೋಪಾಯ ಮತ್ತು ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಸಕ್ರಿಯಗೊಳಿಸಿದೆ. ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಪ್ರಮುಖ ಸರ್ಕಾರಿ ಯೋಜನೆಗಳೊಂದಿಗೆ ಸಂಯೋಜನೆಯ ಮೇಲಿನ ಕೇಂದ್ರೀಕೃತ ಉಪಕ್ರಮಗಳ ಮೂಲಕ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಆದಾಯದ ಮೂಲಗಳನ್ನು ವೈವಿಧ್ಯಗೊಳಿಸಿದೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಿದೆ. ಅದರ ಬಲವಾದ ಮೇಲ್ವಿಚಾರಣಾ ವ್ಯವಸ್ಥೆಗಳು, ಬ್ಯಾಂಕ್ಗಳೊಂದಿಗೆ ಬಲವಾದ ಎಸ್ಎಚ್ಜಿ ಸಂಪರ್ಕಗಳು ಮತ್ತು ಸಾಮರ್ಥ್ಯ-ನಿರ್ಮಾಣ ಕ್ರಮಗಳು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುತ್ತವೆ. ಇದು ಗ್ರಾಮೀಣ ಸಮುದಾಯಗಳಲ್ಲಿ ಸಮಗ್ರ ಬೆಳವಣಿಗೆ ಮತ್ತು ಸುಧಾರಿತ ಜೀವನ ಮಟ್ಟಕ್ಕೆ ಒಂದು ಶಕ್ತಿಯುತ ಚಾಲಕಶಕ್ತಿಯಾಗಿದೆ.

References

Ministry of Rural Development

https://static.pib.gov.in/WriteReadData/specificdocs/documents/2023/dec/doc2023126279701.pdf https://aajeevika.gov.in/home https://aajeevika.gov.in/what-we-do/institutional-capacity-building https://darpg.gov.in/sites/default/files/National%20Rural%20Livilihood%20Mission.pdf https://aajeevika.gov.in/about/goal https://nrlm.gov.in/dashboardForOuter.do?methodName=dashboard https://sansad.in/getFile/loksabhaquestions/annex/185/AU380_bavCuN.pdf?source=pqals https://sansad.in/getFile/loksabhaquestions/annex/185/AU2551_O3P2KL.pdf?source=pqals https://sansad.in/getFile/loksabhaquestions/annex/185/AS138_slGOkB.pdf?source=pqals https://sansad.in/getFiles/loksabhaquestions/annex/185/AU3714_fGFnWZ.pdf?source=pqals https://sansad.in/getFile/loksabhaquestions/annex/185/AU380_bavCuN.pdf?source=pqals https://sansad.in/getFile/loksabhaquestions/annex/185/AU4171_T2uTD0.pdf?source=pqals https://sansad.in/getFile/loksabhaquestions/annex/185/AU2591_TWzqam.pdf?source=pqals https://www.pib.gov.in/FactsheetDetails.aspx?Id=149112 https://www.pib.gov.in/PressReleasePage.aspx?PRID=2043778 https://www.pib.gov.in/PressReleasePage.aspx?PRID=2112203 https://msrls.nic.in/sites/default/files/pldsuccess-storiesmeghalaya.pdf

https://asrlms.assam.gov.in/sites/default/files/swf_utility_folder/departments/asrlm_pnrd_uneecopscloud_com_oid_66/portlet

/level_2/Guidance%20Note_Krishi%20Sakhi.pdf

https://asrlms.assam.gov.in/sites/default/files/Hand%20Book%20for%20Bank%20Sakhi.pdf https://asrlms.assam.gov.in/sites/default/files/swf_utility_folder/departments/asrlm_pnrd_uneecopscloud_com_oid

_66/portlet/level_2/Guidance%20Note_Pashu%20Sakhi.pdf https://lakhpatididi.gov.in/about-lakhpati-didi/

https://www.pib.gov.in/PressReleasePage.aspx?PRID=2149656

Click here for pdf file.

 

*****

(Backgrounder ID: 155657) Visitor Counter : 8
Provide suggestions / comments
Link mygov.in
National Portal Of India
STQC Certificate